ಮನೆ ಜ್ಯೋತಿಷ್ಯ 2022 ರಲ್ಲಿ ಯುದ್ಧ, ಅಣುಬಾಂಬ್‌ ಸ್ಪೋಟ, ಭಯಾನಕ ಭವಿಷ್ಯವಾಣಿ

2022 ರಲ್ಲಿ ಯುದ್ಧ, ಅಣುಬಾಂಬ್‌ ಸ್ಪೋಟ, ಭಯಾನಕ ಭವಿಷ್ಯವಾಣಿ

0

ವಿಶ್ವದ ಖ್ಯಾತ ಫ್ರೆಂಚ್‌ ಜ್ಯೋತಿಷಿ, ಭೌತಜ್ಞಾನಿ ನಾಸ್ಟ್ರಾಡಾಮಸ್‌ನ ಭವಿಷ್ಯವಾಣಿಯು ವಿಶ್ವದಲ್ಲೇ ಅತೀ ಹೆಚ್ಚು ಪ್ರಸಿದ್ಧಿಯನ್ನು ಹೊಂದಿದೆ. “ಲೆಸ್‌ ಪ್ರೊಫೆಟಿಸ್‌” ಎಂಬ ನಾಸ್ಟ್ರಾಡಾಮಸ್‌ ಬರೆದ ಪುಸ್ತಕದಲ್ಲಿ ವಿಶ್ವದಲ್ಲಿ ಮುಂದೆ ಏನಾಗಲಿದೆ ಎಂಬ ಭವಿಷ್ಯವಾಣಿ ಇದೆ. ಆದರೆ ಮುಂಬರುವ ವರ್ಷ 2022 ರ ನಾಸ್ಟ್ರಾಡಾಮಸ್‌ನ ಭವಿಷ್ಯವಾಣಿಯು ಜಗತ್ತನ್ನೇ ತಲ್ಲಣಗೊಳಿಸುವಂತಿದೆ. 2022 ರಲ್ಲಿ ವಿಶ್ವದಲ್ಲಿ ಏನೆಲ್ಲಾ ನಡೆಯಲಿದೆ ಎಂಬ ಬಗ್ಗೆ ನಾಸ್ಟ್ರಾಡಾಮಸ್‌ ಭವಿಷ್ಯವಾಣಿ ನುಡಿದಿದ್ದಾರೆ.

ಖ್ಯಾತ ಫ್ರೆಂಚ್‌ ಜ್ಯೋತಿಷಿ ನಾಸ್ಟ್ರಾಡಾಮಸ್‌ ನೀಡಿರುವ 2022 ರ ಮುನ್ಸೂಚನೆಯು ವಿಶ್ವಕ್ಕೆ ಅತೀ ಕಾಳಜಿಯುತ ವಿಚಾರವಾಗಿದೆ. ಈ ಪುಸ್ತಕದಲ್ಲಿ ಒಟ್ಟು 6338 ಭವಿಷ್ಯವಾಣಿಯು ಇದೆ. 2022 ರಲ್ಲಿ ವಿಶ್ವದಲ್ಲಿ ನಡೆಯಲಿರುವ ಹಲವಾರು ಪ್ರಮುಖ ಬಿಕ್ಕಟ್ಟುಗಳ ಬಗ್ಗೆ ಜ್ಯೋತಿಷಿ ನಾಸ್ಟ್ರಾಡಾಮಸ್‌ ಮುನ್ಸೂಚನೆ ನೀಡಿದ್ದಾರೆ.

2022 ರಲ್ಲಿ ಭೂಮಿಯಲ್ಲಿ ಹಲವಾರು ಬಿಕ್ಕಟ್ಟುಗಳು ಉಂಟಾಗಲಿದೆ. ಪ್ರಮುಖವಾಗಿ ಉಲ್ಕೆಗಳಿಂದಾಗಿ ಭೂಮಿಗೆ ಹಾನಿಯು ಉಂಟಾಗಲಿದೆ. ಸಮುದ್ರದ ಮೇಲೆ ದೊಡ್ಡದಾದ ಬಂಡೆ ಕುಸಿತವಾಗಲಿದೆ. ಇದರಿಂದಾಗಿ ಸಮುದ್ರದಲ್ಲಿ ಒತ್ತಡ ಉಂಟಾಗಿ, ಸುನಾಮಿ ಅಥವಾ ದೊಡ್ಡದಾದ ಅಲೆಯು ಬಂದು ಸಾಕಷ್ಟು ನಷ್ಟ ಉಂಟಾಗುವ ಸಾಧ್ಯತೆ ಇದೆ. ಈ ಬಹು ದೊಡ್ಡ ಸುನಾಮಿಯು ಭೂಮಿಯನ್ನು ಪೂರ್ತಿಯಾಗಿ ಆವರಿಸಲಿದೆ. ಸಮುದ್ರದ ನೀರು ಭೂಮಿ ಪೂರ್ತಿ ತುಂಬಲಿದೆ ಎಂಬ ಬಹು ಕಠೋರವಾದ ಭವಿಷ್ಯವಾಣಿಯನ್ನು ನಾಸ್ಟ್ರಾಡಾಮಸ್‌ ನುಡಿದಿದ್ದಾರೆ.

ಹಿಂದಿನ ಲೇಖನಮಹಾರಾಷ್ಟ್ರದಲ್ಲಿ ಗೂಳಿ ರೇಸ್‌ಗೆ ಸುಪ್ರೀಂಕೋರ್ಟ್ ಅನುಮತಿ
ಮುಂದಿನ ಲೇಖನಆಪರೇಶನ್ಗೆ ಬಂದಿದ್ದ ನೈಜೀರಿಯಾದವ ಸೈಲೆಂಟ್ ಆಗಿ ಡ್ರಗ್ ಪೆಡ್ಲರ್