2023ರನೇ ಸಾಲಿನ ಕಾನ್ ಚಿತ್ರೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮೇ 16ರಿಂದ ಮೇ 27ರವರೆಗೆ ಕಾನ್ ಚಿತ್ರೋತ್ಸವ ನಡೆಯಲಿದೆ.
ದೇಶ-ವಿದೇಶದ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗಿ ಆಗಲು ಕಾದು ಕುಳಿತಿದ್ದಾರೆ. ಸೆಲೆಬ್ರಿಟಿಗಳು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವುದು ಕಾನ್ ಚಿತ್ರೋತ್ಸವದ ಒಂದು ವಿಶೇಷ ಆಕರ್ಷಣೆ. ದೇಶ-ವಿದೇಶದಿಂದ ಬರುವ ನೂರಾರು ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗುತ್ತಾರೆ.
ಫ್ರಾನ್ಸ್’ನಲ್ಲಿ ಚಿತ್ರೋತ್ಸವ ನಡೆಯುತ್ತಿದೆ. ವಿವಿಧ ದೇಶದವರು ಕಾನ್ ಚಿತ್ರೋತ್ಸವದಲ್ಲಿ ಭಾಗಿ ಆಗುತ್ತಿದ್ದಾರೆ. ನಿರ್ದೇಶಕ ಪೌಲ್ ಡೇನೋ, ಅಫ್ಘಾನಿಸ್ತಾನದ ಕಥೆಗಾರ, ನಿರ್ದೇಶಕ ಅತಿಖ್ ರಹೀಮಿ ಮೊದಲಾದವರು ಈ ಸಿನಿಮೋತ್ಸವದ ಪ್ಯಾನೆಲ್’ನಲ್ಲಿದ್ದಾರೆ.
ಈ ಮೊದಲು ಐಶ್ವರ್ಯಾ ರೈ ಬಚ್ಚನ್, ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ ಕಾನ್ ಚಿತ್ರೋತ್ಸವದಲ್ಲಿ ಈ ಮೊದಲು ಭಾಗಿ ಆಗಿದ್ದರು. ಈ ವರ್ಷ ಅನುಷ್ಕಾ ಶರ್ಮಾ ಅವರು ಭಾಗಿ ಆಗುತ್ತಿದ್ದಾರೆ. ಅವರು ರೆಡ್ ಕಾರ್ಪೇಟ್ ಮೇಲೆ ಹೆಜ್ಜೆ ಹಾಕುತ್ತಿದ್ದಾರೆ. ಕಾನ್ ಚಿತ್ರೋತ್ಸವದ ಅಧಿಕೃತ ವೆಬ್ ಸೈಟ್ ನಲ್ಲಿ ಈ ಸಿನಿಮೋತ್ಸವದ ಟಿಕೆಟ್ ಗಳು ಲಭ್ಯವಿದೆ. 6,100 ರೂಪಾಯಿ ಹಾಗೂ 25 ಸಾವಿರ ರೂಪಾಯಿ ರೇಂಜ್ ನಲ್ಲಿ ಟಿಕೆಟ್ ಗಳು ಲಭ್ಯವಿದೆ.
ಟ್ವಿಟರ್ ನಲ್ಲಿ ಈ ಬಗ್ಗೆ ಇಮ್ಯಾನ್ಯುವೆಲ್ ಬರೆದುಕೊಂಡಿದ್ದು, ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರನ್ನು ಭೇಟಿ ಮಾಡಿದ್ದು ಖುಷಿ ನೀಡಿತು. ವಿರಾಟ್ ಹಾಗೂ ಟೀಂ ಇಂಡಿಯಾಗೆ ನಾನು ವಿಶ್ ಮಾಡಿದೆ. ಕಾನ್ ಸಿನಿಮೋತ್ಸವದ ಕುರಿತು ಅನುಷ್ಕಾ ಜೊತೆ ಚರ್ಚೆ ಮಾಡಿದೆ ಎಂದು ಅವರು ಬರೆದುಕೊಂಡಿದ್ದಾರೆ. ಜೊತೆಗೆ ದಂಪತಿ ಜೊತೆ ಇರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ.