ಮನೆ ಆಟೋ ಮೊಬೈಲ್ 2023ರ ಹೀರೋ ಪ್ಯಾಶನ್ ಪ್ಲಸ್ ಬೈಕ್ ಬಿಡುಗಡೆ

2023ರ ಹೀರೋ ಪ್ಯಾಶನ್ ಪ್ಲಸ್ ಬೈಕ್ ಬಿಡುಗಡೆ

0

ದ್ವಿಚಕ್ರ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ ಜನಪ್ರಿಯ ಪ್ಯಾಶನ್ ಪ್ಲಸ್ 2023ರ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ದೆಹಲಿ ಎಕ್ಸ್  ಶೋರೂಂ ಪ್ರಕಾರ ರೂ. 76,301 ಬೆಲೆ ಹೊಂದಿದೆ.

Join Our Whatsapp Group

ಹೀರೋ ಮೋಟೊಕಾರ್ಪ್ ಕಂಪನಿಯು ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬಂದಿರುವ ಬಿಎಸ್ 6 2ನೇ ಹಂತದ ಮಾಲಿನ್ಯ ನಿಯಂತ್ರಣ ಮಾನದಂಡದೊಂದಿಗೆ ತನ್ನ ಹೊಸ ಬೈಕ್ ಮಾದರಿಗಳನ್ನು ಉನ್ನತೀಕರಿಸುತ್ತಿದ್ದು, ಇದೀಗ ಪ್ಯಾಶನ್ ಪ್ಲಸ್ ಆವೃತ್ತಿಯು ಹೊಸ ಮಾನದಂಡಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

ಹೊಸ ಬೈಕ್ ಫೀಚರ್ಸ್

ಹೊಸ ಪ್ಯಾಶನ್ ಪ್ಲಸ್ ಬೈಕಿನಲ್ಲಿ ಹೀರೋ ಕಂಪನಿಯು ಈ ಬಾರಿ ಹಲವಾರು ಆಕರ್ಷಕ ಫೀಚರ್ಸ್ ಜೋಡಣೆ ಮಾಡಿದ್ದು, ಅಲಾಯ್ ವ್ಹೀಲ್ ಜೊತೆಗೆ ಟ್ಯೂಬ್ ಲೆಸ್ ಟೈರ್, ಸೈಡ್ ಸ್ಟ್ಯಾಂಡ್ ಇಂಡಿಕೇಟರ್, ಟೋಯ್ ಗಾರ್ಡ್ ಸೌಲಭ್ಯಗಳನ್ನು ನೀಡಿದೆ. ಹಾಗೆಯೇ ಹಾಲೋಜನ್ ಲೈಟಿಂಗ್ಸ್, ಯುಎಸ್ ಬಿ ಚಾರ್ಜಿಂಗ್ ಪೋರ್ಟ್, ಸೈಡ್ ಮೌಂಟೆಡ್ ಎಕ್ಸಾಸ್ಟ್ ಮತ್ತು ಸೆಮಿ ಡಿಜಿಟಲ್ ಇನ್ಟ್ರುಮೆಂಟ್ ಕ್ಲಸ್ಟರ್ ಸೌಲಭ್ಯಗಳನ್ನು ನೀಡಿದ್ದು, ಹೊಸ ಬೈಕ್ 805 ಎಂಎಂ ಆಸನದ ಎತ್ತರದೊಂದಿಗೆ ಒಟ್ಟು 117 ಕಿ.ಮೀ ತೂಕ ಹೊಂದಿದೆ.

ಎಂಜಿನ್ ಮತ್ತು ಮೈಲೇಜ್

ಹೀರೋ ಮೊಟೋಕಾರ್ಪ್ ಕಂಪನಿಯು ಹೊಸ ಬೈಕಿನಲ್ಲಿ ಹೆಚ್ ಎಫ್ ಡಿಲಕ್ಸ್ ಮಾದರಿಯಲ್ಲಿರುವಂತೆ 97.2 ಸಿಸಿ ಎಂಜಿನ್ ಜೋಡಣೆ ಮಾಡಿದ್ದು, ಇದು 4-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 7.9 ಹಾರ್ಸ್ ಪವರ್ ಮತ್ತು 8.05 ಎನ್ ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಇದರೊಂದಿಗೆ ಹೊಸ ಬೈಕ್ ಉತ್ತಮ ಇಂಧನ ದಕ್ಷತೆ ಹೊಂದಿದ್ದು, ಪ್ರತಿ ಲೀಟರ್ ಪೆಟ್ರೋಲ್ ಗೆ ಗರಿಷ್ಠ 65ರಿಂದ 70 ಕಿ.ಮೀ ಮೈಲೇಜ್ ನೀಡುವುದಾಗಿ ಕಂಪನಿಯು ಭರವಸೆ ನೀಡಿದೆ.

ಹಾಗೆಯೇ ಹೊಸ ಬೈಕಿನಲ್ಲಿ ಹೆಚ್ಚಿನ ಮಟ್ಟದ ಇಂಧನ ದಕ್ಷತೆಗಾಗಿ ನವೀಕೃತ ಎಂಜಿನ್ ಜೊತೆಗೆ ಐ ತ್ರಿ ಎಸ್ ತಂತ್ರಜ್ಞಾನ ಬಳಕೆ ಮಾಡಿದ್ದು, ಇದು ಹೆಚ್ಚಿನ ಟ್ರಾಫಿಕ್ ದಟ್ಟಣೆಯ ಸಂದರ್ಭದಲ್ಲಿ ಅನಗತ್ಯ ಇಂಧನ ಬಳಕೆಯನ್ನು ತಪ್ಪಿಸುವ ಮೂಲಕ ಮೈಲೇಜ್ ಹೆಚ್ಚಳಕ್ಕೆ ಸಹಕಾರಿಯಾಗಿದೆ.