ಮನೆ ರಾಜ್ಯ ಕಲುಷಿತ ಆಹಾರ ಸೇವಿಸಿ 21 ಜನರು ಅಸ್ವಸ್ಥ

ಕಲುಷಿತ ಆಹಾರ ಸೇವಿಸಿ 21 ಜನರು ಅಸ್ವಸ್ಥ

0

ಕಲಬುರಗಿ: ಕಲುಷಿತ ಆಹಾರ ಸೇವಿಸಿ 21 ಜನರು ಅಸ್ವಸ್ಥಗೊಂಡಿರುವ ಘಟನೆ ಜಿಲ್ಲೆಯ ಆಳಂದ ಪಟ್ಟಣದಲ್ಲಿ ನಡೆದಿದೆ.

Join Our Whatsapp Group

ಅಸ್ವಸ್ಥರು ವಿಜಯಪುರ ಜಿಲ್ಲೆಯ ಚಡಚಣದ ಡೋಣಿ ನಿವಾಸಿಗಳು ಎಂದು ತಿಳಿದುಬಂದಿದೆ.

ಡೋಣಿ ನಿವಾಸಿಗಳು ನಿನ್ನೆ (ಜೂನ್​.01) ರಂದು ಲಾಡ್ಲೇ ಮಶಾಕ್ ದರ್ಗಾಕ್ಕೆ ಹರಕೆ ತೀರಿಸಲು ಬಂದಿದ್ದರು. ಊಟ ಸೇವಿಸಿದ್ದ ಬಳಿಕ ವಾಂತಿ ಭೇದಿ ಕಾಣಿಸಿಕೊಂಡು ಅಸ್ವಸ್ಥಗೊಂಡಿದ್ದಾರೆ.

ಅಸ್ವಸ್ಥರಿಗೆ ಆಳಂದ‌ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.