ಮನೆ ಅಪರಾಧ ಸಾಲ ತೀರಿಸಲಾಗದೆ 21 ವರ್ಷದ ಕಾರು ಚಾಲಕ ಸಾವಿಗೆ ಶರಣು.!

ಸಾಲ ತೀರಿಸಲಾಗದೆ 21 ವರ್ಷದ ಕಾರು ಚಾಲಕ ಸಾವಿಗೆ ಶರಣು.!

0

ಬೆಂಗಳೂರು: ನಗರದಲ್ಲಿ ಮತ್ತೊಂದು ಸೂಸೈಡ್ ಪ್ರಕರಣ ಬೆಳಕಿಗೆ ಬಂದಿದ್ದು, ಕಾರು ಖರೀದಿಗೆ ಮಾಡಿದ್ದ ಸಾಲವನ್ನು ತೀರಿಸಲಾಗದೆ, ಕಾರು ಚಾಲಕಾನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ.

ಮೃತನನ್ನು ದೇವರಾಜ್ (21) ಎಂದು ಗುರುತಿಸಲಾಗಿದೆ. ದೇವರಾಜ್ ಮೂಲತಃ ಕಲಬುರ್ಗಿ ಜಿಲ್ಲೆಯವನಾಗಿದ್ದು ಬೆಂಗಳೂರಿನಲ್ಲಿ ಕಾರು ಚಾಲಕರಾಗಿ ದುಡಿಯುತ್ತಿದ್ದರು. ಜೀವನದಲ್ಲಿ ಸ್ವಂತ ಕಾರು ಹೊಂದಬೇಕು ಎಂಬ ಕನಸು ಕಂಡು, ಕಳೆದ ವರ್ಷ ಬ್ಯಾಂಕ್‌ನಿಂದ ಸಾಲ ಪಡೆದು ಹೊಸ ಕಾರು ಖರೀದಿಸಿದ್ದರು. ಇದರ ಇಎಂಐ ಪಾವತಿಸಲು ತಮ್ಮ ಕಾರನ್ನು ಬಾಡಿಗೆಗೆ ನೀಡುವ ಯೋಜನೆ ಮಾಡಿಕೊಂಡಿದ್ದರು. ಆದರೆ ಇತ್ತೀಚಿನ ತಿಂಗಳುಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಬಾಡಿಗೆ ಸಿಗದೆ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದರು.

ಬ್ಯಾಂಕ್ ನಿಂದ ಬಾಕಿ ಹಣವನ್ನು ಪಾವತಿಸಲು ತೀವ್ರ ಒತ್ತಡ ಬಂದಿತ್ತು. ಇತ್ತೀಚೆಗೆ ದೇವರಾಜ್‌ ಅವರಿಗೆ ಇಎಂಐ ಬಾಕಿ ಕುರಿತು ನೋಟಿಸ್ ಬಂದಿತ್ತು. ಈ ಆರ್ಥಿಕ ಒತ್ತಡದ ಪರಿಣಾಮವಾಗಿ ಅವರು ಮಾನಸಿಕವಾಗಿ ಕುಗ್ಗಿದಂತಾಯಿತು.

ಸೋಲದೇವನಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯ ಚಿಕ್ಕಬಾಣಾವರದ ಬಾಡಿಗೆ ಮನೆಯಲ್ಲಿ, ದೇವರಾಜ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಸಂಜೆ ವೇಳೆ ಬೆಳಕಿಗೆ ಬಂದಿದ್ದು, ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅತ್ಮಹತ್ಯೆಗೆ ಕಾರಣಗಳ ಕುರಿತು ತನಿಖೆ ಪ್ರಾರಂಭಿಸಲಾಗಿದೆ. ಬ್ಯಾಂಕ್‌ನ ಶೋಧನೆ, ಸಾಲದ ವಿವರಗಳು ಮತ್ತು ದೇವರಾಜ್‌ ಅವರ ಮೊಬೈಲ್‌ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.