ಬಾಗಲಕೋಟೆ: ಅಪ್ರಾಪ್ತ ತಮ್ಮನಿಗೆ ಬೈಕ್ ನೀಡಿದ್ದ ಅಣ್ಣನಿಗೆ ಜಿಲ್ಲೆಯ ಜಮಖಂಡಿ ಜೆಎಂಎಫ್ ಸಿ ಕೋರ್ಟ್ 25 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
ಅಪ್ರಾಪ್ತ ಸಹೋದರನಿಗೆ ಬೈಕ್ ಚಲಾಯಿಸಲು ನೀಡಿದ್ದ ತಪ್ಪಿಗೆ ಸಚಿನ್ ರಮೇಶ್ ರಾಠೋಡ್ ಗೆ 25 ಸಾವಿರ ರೂ. ದಂಡ ವಿಧಿಸಲಾಗಿದೆ. ಹುಲ್ಯಾಳದಿಂದ ಜಮಖಂಡಿಗೆ ಬರುವಾಗ ಬೈಕ್ ನೀಡಿದ್ದಾನೆ.
ಈ ವೇಳೆ ಮಾರ್ಗಮಧ್ಯೆ ವಾಹನ ತಪಾಸಣೆ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಫೆಬ್ರವರಿ 23ರಂದು ಜಮಖಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೋಟಾರು ವಾಹನ ಕಾಯ್ದೆ ಉಲ್ಲಂಘನೆ ಆರೋಪದಡಿ ಕೇಸ್ ದಾಖಲಿಸಲಾಗಿದ್ದು, ಬೈಕ್ ಮಾಲೀಕ ಸಚಿನ್ ಗೆ 25,000 ರೂ. ದಂಡ ವಿಧಿಸಿದೆ.
Saval TV on YouTube