ಹುಣಸೂರು(Hunsur): ಪ್ರಕೃತಿ ಆದಿವಾಸಿ ಫೌಂಡೇಶನ್ ಟ್ರಸ್ಟ್ ಓಲ್ಡ್ ಏಜ್ ಹೋಮ್ ಸಹಯೋಗದೊಂದಿಗೆ ಮೈಸೂರು ವಿಶ್ವವಿದ್ಯಾನಿಲಯ ಕಾನೂನು ವಿಭಾಗ ಸಹಯೋಗದೊಂದಿಗೆ 28ನೇ ವಿಶ್ವ ಆದಿವಾಸಿ ದಿನಾಚರಣೆಯನ್ನು ಮಂಗಳೂರು ಮಾಳ ಮತ್ತು ಬೀರನ ತಮ್ಮಡಹಳ್ಳಿ ಹಾಡಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕಾನೂನು ವಿಭಾಗದ ಪ್ರೊಫೆಸರ್ ಮಾರುತಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಕಾನೂನಿನ ಅರಿವಿನ ಬಗ್ಗೆ ಉಪನ್ಯಾಸ ನೀಡಿದರು.
ಆದಿವಾಸಿಗಳು ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಸಮಾಜದಲ್ಲಿ ಮುಖ್ಯವಾಹಿನಿಗೆ ಬರಬೇಕೆಂದು ಕರೆ ನೀಡಿದರು.
ಅಧ್ಯಕ್ಷ ಎಂ ಕೃಷ್ಣಯ್ಯ ಮಾತನಾಡಿ, ಆದಿವಾಸಿ ಸಮುದಾಯದ ದ್ರೌಪದಿಮುರ್ಮು ಅವರು ರಾಷ್ಟ್ರಪತಿ ಸ್ಥಾನ ಅಲಂಕರಿಸಿರುವುದು ಆದಿವಾಸಿಗಳ ಹೆಮ್ಮೆಯ ವಿಷಯವಾಗಿದೆ. ಅದಕ್ಕಾಗಿ ಭಾರತ ಸರ್ಕಾರವನ್ನು ಅಭಿನಂದಿಸುತ್ತೇನೆ ಎಂದರು.
ಆದಿವಾಸಿ ಮಹಿಳೆಯರ ಸಬಲೀಕರಣ ಹಾಗೂ ಪಾರಂಪರಿಕ ಜ್ಞಾನ ನಮ್ಮ ಔಷಧಿ ಪದ್ಧತಿಗಳು ಉಳಿಸಿ ಬೆಳೆಸಿಕೊಂಡು ಹೋಗುವುದು ಅನಿವಾರ್ಯ. ಈ ಸಂದರ್ಭದಲ್ಲಿ ನಮ್ಮ ಸಂಸ್ಕೃತಿ ಕಲೆ ನಮ್ಮ ಆಚಾರ-ವಿಚಾರಗಳು ನಾವು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಮಾರ್ಗದರ್ಶಿಗಳ ಆಗುವುದು ಬಹುಮುಖ್ಯವಾಗಿದೆ. ಆದ್ದರಿಂದ ಯೋಜನೆಗಳ ಅರಿವಿನ ಬಗ್ಗೆ ತಿಳಿದು ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.
ಬೀರ ತಮ್ಮನಹಳ್ಳಿ ಹಾಡಿಯಲ್ಲಿ ಪ್ರಕೃತಿ ಆದಿವಾಸಿ ಫೌಂಡೇಶನ್ ವತಿಯಿಂದ ಮಹಿಳೆಯರಿಗೆ ಸೀರೆಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಹಾಡಿಯ ಮುಖಂಡರು ಮಂಗಳೂರು ಮಾಳ ಮುಖಂಡರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು ಮುಖಂಡರುಗಳಾದ ಹಾಗೂ ಧರ್ಮರಾಜ್,ಶಿವಾಜಿ, ಶೇಟ್ವ ಯಶವಂತ, ಶ್ರೀಮಂತ ಕಮಲಾಬಾಯಿ,ಕಲ್ಪನಾ ಬಾಯ್, ಸುಬ್ರಮಣ್ಯ ವೈದ್ಯ ಟ್ರಸ್ಟಿ, ಮುತ್ತಮ್ಮ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದಂತಹ ವೆಂಕಟೇಶ್ ಕಾನೂನು ವಿದ್ಯಾರ್ಥಿಗಳಾದ ಪ್ರಜ್ವಲ್ ಹಾಗೂ ನವೀನ್ ಬೀರ ತಮ್ಮಡಹಳ್ಳಿ ಹಾಡಿಯ 100 ಕ್ಕೂ ಹೆಚ್ಚು ಅದಿವಾಸಿಗಳು, ಮಂಗಳೂರು ಮಾಳದಲ್ಲಿ 200 ಕ್ಕೂ ಹೆಚ್ಚು ಅದಿವಾಸಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.