ಮನೆ ರಾಜ್ಯ ಯದುವೀರ್ ಒಡೆಯರ್ ಅವರಿಗೆ 2ನೇ ಮಗು ಜನನ

ಯದುವೀರ್ ಒಡೆಯರ್ ಅವರಿಗೆ 2ನೇ ಮಗು ಜನನ

0

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮೈಸೂರು ರಾಜವಂಶದಲ್ಲಿ ಸಂಭ್ರವನ್ನು ಡಬಲ್ ಮಾಡಿದೆ. ರಾಜವಂಶಸ್ಥ, ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಎರಡನೇ ಪುತ್ರೋತ್ಸವದ ಸಂಭ್ರಮ ಮನೆ ಮಾಡಿದೆ. ಆಯುಧ ಪೂಜೆ ದಿನವಾದ ಶುಕ್ರವಾರ(ಅ11) ತ್ರಿಷಿಕಾ ಕುಮಾರಿ ಅವರು ಎರಡನೇ ಪುತ್ರನಿಗೆ ಜನ್ಮ ನೀಡಿದ್ದಾರೆ.

Join Our Whatsapp Group

ದಸರಾ ವೇಳೆಯೇ ರಾಜಮನೆತನ ಸಂಭ್ರಮ ಆಚರಿಸುತ್ತಿದ್ದು, ತ್ರಿಷಿಕಾ ಕುಮಾರಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.

ವಿಧಿವಿಧಾನಗಳು ಹೇಗೆ?

ಪುತ್ರನ ಜನನವಾದ ಕಾರಣ ಯದುವೀರ್ ಅವರಿಗೆ ಜಾತ ಶೌಚ (ವೃದ್ಧಿ) ಆಚರಿಸಬೇಕಾಗಿದ್ದು, ಅರಮನೆಯಲ್ಲಿ ನಡೆಯಬೇಕಾಗಿರುವ ಧಾರ್ಮಿಕ ವಿಧಿಗಳಿಗೆ ಯಾವುದೇ ಅಡಚಣೆ ಇಲ್ಲ ಎಂದು ಹೇಳಲಾಗಿದೆ. ಆಗಮಿಕರು ಪೂಜೆ ಮಾಡಲಿದ್ದು, ಯದುವೀರ್ ಅವರು ಈಗಾಗಲೇ ಕಂಕಣ ಧಾರಣೆ ಮಾಡಿದ್ದಾರೆ. ವಿಜಯದಶಮಿ ಜಂಬೂ ಸವಾರಿ ಯಾತ್ರೆ ಮುಗಿಯುವವರೆಗೆ ಯಾವುದೇ ಜಾತ ಶೌಚ ಅನ್ವಯವಾಗುವುದಿಲ್ಲ ಎಂದು ಪಂಡಿತರು ತಿಳಿಸಿದ್ದಾರೆ.

ನಾಳೆಯೂ(ವಿಜಯ ದಶಮಿ) ಯದುವೀರ್ ಅವರು ಕಂಕಣ ಸಹಿತ ಅಪರಾಚಿತ ಪೂಜೆ, ಶಮಿ ವೃಕ್ಷಕ್ಕೆ ಪೂಜೆ ಮಾಡಬೇಕಾಗಿದೆ ಎಂದು ಪುರೋಹಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಸಾಮಾನ್ಯವಾಗಿ ಆಯುಧ ಪೂಜೆಯ ರಾತ್ರಿ ಕಂಕಣವನ್ನು ತೆಗೆಯುವ ಕ್ರಮವಿದೆ.

2016 ರಲ್ಲಿ ಯದುವೀರ್ ಒಡೆಯರ್ ಅವರು ರಾಜಸ್ಥಾನದ ಡುಂಗರ್‌ಪುರ ರಾಜಮನೆತನದ ಹರ್ಷವರ್ಧನ್ ಸಿಂಗ್ ಮತ್ತು ಮಹೇಶ್ರಿ ಕುಮಾರಿ ಅವರ ಪುತ್ರಿ ತ್ರಿಷಿಖಾ ಕುಮಾರಿ ದೇವಿ ಅವರನ್ನು ವಿವಾಹವಾಗಿದ್ದರು. 2017 ಡಿಸೆಂಬರ್ 6 ರಂದು ಮೊದಲ ಪುತ್ರನಿಗೆ ಜನ್ಮ ನೀಡಿದ್ದರು. ಆದ್ಯವೀರ್ ನರಸಿಂಹರಾಜ ಒಡೆಯರ್ ಎಂಬ ಹೆಸರು ಮೊದಲ ಮಗನಿಗೆ ಇಡಲಾಗಿದೆ.