ಪೋರ್ಟ್ ಆಫ್ ಸ್ಪೇನ್ : ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಡ್ರಾ ಆಗಿದೆ. ಅಂತಿಮ ದಿನದಾಟಕ್ಕೆ ವರುಣ ಅಡ್ಡಿಪಡಿಸಿದ್ದರಿಂದ ಒಂದೇ ಒಂದು ಎಸೆತವನ್ನೂ ಕಾಣದೇ ಪಂದ್ಯ ಮುಗಿಯಿತು. ಈ ಮೂಲಕ ಕೆರಿಬಿಯನ್ನರನ್ನು ವೈಟ್ ವಾಶ್ ಮಾಡುವ ರೋಹಿತ್ ಪಡೆಯ ರಣತಂತ್ರ ಫಲಿಸಲಿಲ್ಲ. 1-0 ರ ಅಂತರದಿಂದ ಭಾರತ ಸರಣಿ ವಶಪಡಿಸಿಕೊಂಡಿದೆ.
ಎರಡನೇ ಟೆಸ್ಟ್ ಪಂದ್ಯದಲ್ಲಿ ವಿಂಡೀಸ್ ಗೆಲುವಿಗೆ ಭಾರತ 365 ರನ್ ಗಳ ಗುರಿ ನೀಡಿತ್ತು. ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ನಾಲ್ಕನೇ ದಿನದಾಟದ ಅಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿತ್ತು. ವೆಸ್ಟ್ ಇಂಡೀಸ್ ಗೆಲುವಿಗೆ ಐದನೇ ದಿನಕ್ಕೆ 289 ರನ್ ಗಳ ಅಗತ್ಯವಿತ್ತು. ಆದರೆ ಉಭಯ ತಂಡಗಳ ಗೆಲುವಿನ ಆಸೆಗೆ ಮಳೆರಾಯ ತಣ್ಣೀರೆರಚಿದ. ಮಳೆರಾಯ ನಿಂದ ಪಂದ್ಯ ಡ್ರಾ ಹಾಯಿತ್ತು, ಭಾರತ ಮತ್ತು ವೆಸ್ಟ್ ಇಂಡೀಸ್ ವಿರುದ್ಧ 1-0 ರ ಅಂತರದಿಂದ ಭಾರತ ಸರಣಿ ವಶಪಡಿಸಿಕೊಂಡಿತ್ತು.














