ಮನೆ ರಾಷ್ಟ್ರೀಯ ಲಡಾಖ್ ​ನಲ್ಲಿ 3.4 ತೀವ್ರತೆಯ ಭೂಕಂಪ

ಲಡಾಖ್ ​ನಲ್ಲಿ 3.4 ತೀವ್ರತೆಯ ಭೂಕಂಪ

0

ಲಡಾಖ್: ಲಡಾಖ್ ​ನ ಲೇಹ್ ​ನಲ್ಲಿ 3.4 ತೀವ್ರತೆಯ ಲಘು ಭೂಕಂಪ ಸಂಭವಿಸಿದೆ.

ಭೂಕಂಪದ 5 ಕಿ.ಮೀ ಆಳದಲ್ಲಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಭೂಕಂಪದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟವಾಗಿದೆಯೇ ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

ಭೂಕಂಪವು ಲಡಾಖ್ ಪ್ರದೇಶದಲ್ಲಿ ಬೆಳಗ್ಗೆ 5.39 ಕ್ಕೆ ಸಂಭವಿಸಿದೆ. ಭೂಕಂಪದ ಕೇಂದ್ರ ಬಿಂದುವು 35.27 ರ ಅಕ್ಷಾಂಶ ಮತ್ತು 75.40 ರ ರೇಖಾಂಶದಲ್ಲಿದೆ. ಸದ್ಯ ಈ ಭೂಕಂಪದಿಂದ ಯಾವುದೇ ಪ್ರಾಣ ಅಥವಾ ಆಸ್ತಿ ಹಾನಿಯಾಗಿಲ್ಲ.

ಬೆಳಗ್ಗೆ ಲಡಾಖ್‌ನಲ್ಲಿ ಭೂಕಂಪ ಸಂಭವಿಸಿದಾಗ, ಹೆಚ್ಚಿನ ಜನರು ತಮ್ಮ ಮನೆಗಳಲ್ಲಿ ಮಲಗಿದ್ದರು. ನಡುಕ ಅನುಭವಿಸಿದ ಕೆಲವರು ಮನೆಯಿಂದ ಹೊರಗೆ ಬಂದರು. ಯಾವುದೇ ಹಾನಿಯಾಗಿಲ್ಲ ಎಂದು ವಿಪತ್ತು ಇಲಾಖೆ ತಿಳಿಸಿದೆ.