ಮನೆ ಪ್ರಕೃತಿ ಮೇ 17 ರಿಂದ ದಕ್ಷಿಣದ ಹಲವು ರಾಜ್ಯಗಳಲ್ಲಿ 3 ದಿನಗಳ ಆನೆ ಗಣತಿ

ಮೇ 17 ರಿಂದ ದಕ್ಷಿಣದ ಹಲವು ರಾಜ್ಯಗಳಲ್ಲಿ 3 ದಿನಗಳ ಆನೆ ಗಣತಿ

0

ಬೆಂಗಳೂರು: ದಕ್ಷಿಣದ ರಾಜ್ಯಗಳಲ್ಲಿ ಆನೆ ಗಣತಿಯನ್ನು ನಡೆಸಲು ಅರಣ್ಯ ಇಲಾಖೆಯು ಮುಂದಾಗಿದ್ದು, ಮೇ 17 ರಂದು ಆರಂಭವಾಗಲಿರುವ ಗಣತಿ ಮೂರು ದಿನಗಳ ಕಾಲ ನಡೆಯಲಿದೆ.

Join Our Whatsapp Group

ಅಖಿಲ ಭಾರತ ಗಣತಿಯನ್ನು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಇನ್ನೂ ಘೋಷಿಸದ ಕಾರಣ ಕರ್ನಾಟಕ ಅರಣ್ಯ ಇಲಾಖೆಯು ಈ ಪ್ರಕ್ರಿಯೆಯನ್ನು ಪ್ರಾರಂಭಿಸುವಲ್ಲಿ ಮುಂದಾಳತ್ವ ವಹಿಸಿದೆ.

ಗಣತಿಯು ನೇರ ಮತ್ತು ಪರೋಕ್ಷ ಮೌಲ್ಯಮಾಪನ ವಿಧಾನಗಳನ್ನು ಒಳಗೊಂಡಿರುತ್ತದೆ. ನೀರಿನ ಹೊಂಡಗಳಲ್ಲಿ ಎಣಿಕೆ, ಸಗಣಿ ವಿಶ್ಲೇಷಣೆ, ಸಸ್ಯವರ್ಗ ಮತ್ತು MoEFCC ಪಟ್ಟಿ ಮಾಡಿರುವ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಲಾಗುವುದು ಎಂದು ವನ್ಯಜೀವಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಜೀವ್ ರಂಜನ್ ತಿಳಿಸಿದರು.

ಗಣತಿಯನ್ನು ಒಂದೇ ಸ್ವರೂಪದಲ್ಲಿ ಮತ್ತು ಅದೇ ಸಮಯದಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಗೋವಾದಲ್ಲಿಯೂ ಮಾಡಲಾಗುತ್ತದೆ. ಇದು ಅಲೆದಾಡುವ ಆನೆಗಳ ಸಂಖ್ಯೆಯನ್ನು ತಿಳಿಯಲು ನೆರವಾಗುತ್ತದೆ. ಕರ್ನಾಟಕದ ಆನೆಗಳು ಈ ಎರಡು ರಾಜ್ಯಗಳಲ್ಲಿ ಹೆಚ್ಚಾಗಿ ಅಲೆದಾಡುತ್ತಿರುವ ಕಾರಣ ಮಹಾರಾಷ್ಟ್ರ ಮತ್ತು ಗೋವಾವನ್ನು ಸಹ ಗಣತಿಯ ವ್ಯಾಪ್ತಿಗೆ ತರಲಾಗಿದೆ ಎಂದು ಹೇಳಿದರು.

ಮಾನವ-ಆನೆ ಸಂಘರ್ಷದ ಇತ್ತೀಚಿನ ಘಟನೆಗಳ ಹಿನ್ನೆಲೆಯಲ್ಲಿ, ಈ ಬಾರಿ ಮೌಲ್ಯಮಾಪನಕ್ಕೆ ಸ್ವಯಂಸೇವಕರು ಅಥವಾ ವಿದ್ಯಾರ್ಥಿಗಳನ್ನು ಬಳಸಿಕೊಳ್ಳದಿರಲು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ಸಿಬ್ಬಂದಿ ಮತ್ತು ಜನರ ಸುರಕ್ಷತೆಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.