ಬೆಂಗಳೂರು : ಕೊಲೆ ಆರೋಪಿಯಾಗಿ ಜೈಲು ಸೇರಿರುವ ನಟ ದರ್ಶನ್ ಮನೆಯಲ್ಲಿ ಬರೋಬ್ಬರಿ 3 ಲಕ್ಷ ರೂ. ನಗದು ಕಳ್ಳತನವಾಗಿದೆ.
ಪತ್ನಿ ವಿಜಯಲಕ್ಷ್ಮಿ ದರ್ಶನ್ ವಾಸವಿರುವ ಹೊಸಕೆರೆಹಳ್ಳಿಯ ಪ್ರೆಸ್ಟಿಜ್ ಅಪಾರ್ಟ್ಮೆಂಟ್‌ನ ಫ್ಲಾಟ್‌ನಲ್ಲಿ ಕಳ್ಳತನವಾಗಿದೆ. ಖತರ್ನಾಕ್ ಕಳ್ಳರು ಬೆಡ್‌ರೂಮ್‌ನಲ್ಲಿದ್ದ ಮೂರು ಲಕ್ಷ ನಗದು ಹಣವನ್ನ ಕದ್ದೊಯ್ದಿದ್ದಾರೆ.
ಕಳ್ಳತನ ಸಂಬಂಧ ಮ್ಯಾನೇಜರ್ ನಾಗರಾಜ್ ಮೂಲಕ ವಿಜಯಲಕ್ಷ್ಮಿ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಒಂದು ವಾರದ ನಡುವೆ ಹಣ ಕಳ್ಳತನವಾಗಿದ್ದು, ಮನೆಗೆಲಸದವರ ಮೇಲೆ ಅನುಮಾನವಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.















