ಮನೆ ಅಪರಾಧ ವ್ಯಾಪಾರಿಯಿಂದ ಮೂರು ಲೋಡ್ ಟಮೊಟೊ ಪಡೆದು 30 ಲಕ್ಷ ರೂ. ಹಣ ನೀಡದೆ ವಂಚನೆ: ದೂರು...

ವ್ಯಾಪಾರಿಯಿಂದ ಮೂರು ಲೋಡ್ ಟಮೊಟೊ ಪಡೆದು 30 ಲಕ್ಷ ರೂ. ಹಣ ನೀಡದೆ ವಂಚನೆ: ದೂರು ದಾಖಲು

0

ಬೆಂಗಳೂರು: ವ್ಯಾಪಾರಿಯೊಬ್ಬರಿಂದ ಮೂರು ಲೋಡ್ ಟಮೊಟೊ ಪಡೆದು 30 ಲಕ್ಷ ರೂ. ಹಣ ನೀಡದೆ ವಂಚನೆ ಮಾಡಿರುವಂತಹ ಘಟನೆ ವೈಟ್ ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Join Our Whatsapp Group

ಒಟ್ಟು 32 ಲಕ್ಷ ರೂ. ಪೈಕಿ 20 ಲಕ್ಷ ರೂ. ಕಳುಹಿಸಿದ್ದ ಆರೋಪಿಗಳು, ಕಳುಹಿಸಿದ್ದ 20 ಲಕ್ಷ ರೂ. ಹಣದಲ್ಲೂ ಬಿಳಿ ಹಾಳೆ ಇಟ್ಟು ಮೋಸ ಮಾಡಿದ್ದಾರೆ.

ಸಂಜಯ್ ಮತ್ತು ಮುಕೇಶ್ ಎಂಬುವವರ ವಿರುದ್ಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಆದಿತ್ಯ ದೂರು ದಾಖಲಿಸಿದ್ದಾರೆ.

ಆದಿತ್ಯ ಷಾ ಎಂಬುವವರು ಕೋಲಾರದ ಎಪಿಎಂಸಿ ಮಾರುಕಟೆಯಲ್ಲಿ ಟಮೊಟೊ ವ್ಯಾಪಾರಸ್ಥರಾಗಿದ್ದಾರೆ. ಪಶ್ಚಿಮ ಬಂಗಾಳದ ಸಿಲಿಗುರಿ ಮಾರ್ಕೆಟ್​ನ ಮುಕೇಶ್​ ಎಂಬುವವರಿಗೆ ಆದಿತ್ಯಾ ಷಾ ಮೂರು ಲೋಡ್ ಟಮೊಟೊ ಕಳುಹಿಸಿದ್ದರು.

ಮುಕೇಶ್ ಬೆಂಗಳೂರಿನ ಸಂಜಯ್​ ಎಂಬಾತನ ಬಳಿ ಹಣ ಕಳುಹಿಸುವುದಾಗಿ ಹೇಳಿದ್ದ. ಅದರಂತೆಯೇ ಕಳೆದ ತಿಂಗಳು 15 ರಂದು ಸಂಜಯ್​ ವೈಟ್ ಫೀಲ್ಡ್ ಬಳಿ ಹಣದ ಬ್ಯಾಗ್​​ ತೆಗೆದುಕೊಂಡು ಬಂದಿದ್ದ. 20 ಲಕ್ಷ ರೂ. ಹಣ ಇದೇ ಅಂತ ಬ್ಯಾಗ್​ ತೆಗೆದು ಹಣ ತೋರಿಸಿದ್ದ.

ಹಣ ನೋಡಿದ್ದ ಆದಿತ್ಯಾ 500 ಮುಖ ಬೆಲೆಯ ನೋಟಿನ ಮೇಲೆ ಆಕ್ಸಿಸ್ ಬ್ಯಾಂಕ್​​ ಸೀಲ್‌ ಕವರ್ ನೋಡಿ ಮನೆಗೆ ಹಣ ತೆಗೆದಕೊಂಡು ಹೊಗಿದ್ದರು. ಮನೆಗೆ ಹೋಗಿ ಹಣ ಏಣಿಕೆ ಮಾಡುವಾಗ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ಹಣದ ಕಂತೆ ಮೇಲೆ ಮತ್ತು ಕೆಳಗೆ ಅಸಲಿ ನೋಟುಗಳಿದ್ದು, ಮಧ್ಯದಲ್ಲಿ ಬಿಳಿ ಹಾಳೆ ಇಟ್ಟು ಮೋಸ ಮಾಡಿದ್ದಾರೆ.