ಮನೆ ಮನರಂಜನೆ ಒಂದೇ ದಿನದಲ್ಲಿ 33 ಮಿಲಿಯನ್ ವೀಕ್ಷಣೆ ಕಂಡ `ಬೀಸ್ಟ್’

ಒಂದೇ ದಿನದಲ್ಲಿ 33 ಮಿಲಿಯನ್ ವೀಕ್ಷಣೆ ಕಂಡ `ಬೀಸ್ಟ್’

0

ಬೆಂಗಳೂರು (Bengaluru): ತಮಿಳು ನಟ ವಿಜಯ್‌(Vijay) ಅವರ ’ಬೀಸ್ಟ್‌‘ (Beast) ಸಿನಿಮಾದ ಟ್ರೈಲರ್(Trailer) ಭಾನುವಾರ ಸನ್‌ ಪಿಕ್ಚರ್ಸ್ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಒಂದೇ ದಿನದಲ್ಲಿ 33 ಮಿಲಿಯನ್ ವೀಕ್ಷಣೆ ಕಂಡಿದೆ.

ಸನ್‌ ಪಿಕ್ಚರ್‌ ನಿರ್ಮಾಣದ ಈ ಚಿತ್ರಕ್ಕೆ ನೆಲ್ಸನ್‌ ದಿಲೀಪ್‌ಕುಮಾರ್ (Nelson Dilip kumar) ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಮೊಟ್ಟ ಮೊದಲ ಬಾರಿಗೆ ಪೂಜಾ ಹೆಗ್ಡೆ(Pooja Hegde) ಮತ್ತು ವಿಜಯ್‌ ಜೊತೆಯಾಗಿ ನಟಿಸಿರುವ ಚಿತ್ರ ಇದಾಗಿದೆ.

ಟ್ರೈಲರ್‌ನಲ್ಲಿ ಮಾಲ್‌ ಒಂದನ್ನು ಉಗ್ರರು ಹೈಜಾಕ್(Hijack) ಮಾಡಿರುವಾಗ ಜನರನ್ನು ಉಗ್ರರ ಕೈಯಿಂದ ಬಿಡುಗಡೆ ಮಾಡುವ ಯೋಧನ ಪಾತ್ರವನ್ನು ವಿಜಯ್ ನಿರ್ವಹಿಸಿದಂತೆ ತೋರುತ್ತಿದೆ.. ತೀವ್ರ ಕುತೂಹಲ ಕೆರಳಿಸುದ ಬೀಸ್ಟ್‌ ವಿಜಯ್ ಅವರ 65 ನೇ ಚಿತ್ರವಾಗಿದೆ.

ಇನ್ನು ಬೀಸ್ಟ್ ಸಿನಿಮಾ ಕೂಡ ಏಪ್ರಿಲ್ 13 ರಂದು ಬಿಡುಗಡೆಯಾಗುತ್ತಿದೆ. ಒಂದು ದಿನ ತಡವಾಗಿ ಅಂದರೆ ಏಪ್ರಿಲ್ 14 ರಂದು ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ( KGF Chapter-2) ಬಿಡುಗಡೆಯಾಗಲಿದೆ. ಬಾಕ್ಸ್‌ ಆಫೀಸ್‌ನಲ್ಲಿ ಎರಡೂ ಚಿತ್ರಗಳಿಗೆ ಘರ್ಷಣೆ ಏರ್ಪಡಲಿದೆ ಎಂದು ಸಿನಿಮಾ ತಜ್ಞರು ಹೇಳುತ್ತಿದ್ದಾರೆ.

ಕೆಜಿಎಫ್ ಚಾಪ್ಟರ್ 2 ಟ್ರೈಲರ್ ಬಿಡುಗಡೆಯಾದ ದಿನ ಬೀಸ್ಟ್ ನಿರ್ದೇಶಕ ನೆಲ್ಸನ್ ಟ್ರೈಲರ್‌ಗೆ ಶುಭ ಕೋರಿದ್ದರು. ತಾವು ಚಿತ್ರ ನೋಡಲು ಕಾತರರಾಗಿದ್ದೇವೆ ಎಂದಿದ್ದರು. ಇನ್ನು ನಟ ಯಶ್ ಕೂಡ ಬೀಸ್ಟ್‌ ಸಿನಿಮಾಕ್ಕೆ ಶುಭಾಶಯ ಕೋರಿದ್ದರು. ಕೆಜಿಎಫ್ ಚಾಪ್ಟರ್ 2 ನಿರ್ದೇಶಕ ಪ್ರಶಾಂತ್ ನೀಲ್ ನೆಲ್ಸನ್ ಅವರಿಗೆ ಶುಭಾಶಯ ಹೇಳಿದ್ದು, ಬೀಸ್ಟ್‌ ಚಿತ್ರ ವೀಕ್ಷಿಸುವುದಾಗಿ ಹೇಳಿದ್ದಾರೆ.

ಹಿಂದಿನ ಲೇಖನಬುದ್ದಿ ಮಾತು ಹೇಳಿದ್ದಕ್ಕೆ ಅಣ್ಣನನ್ನೇ ಕೊಂದ ತಮ್ಮ
ಮುಂದಿನ ಲೇಖನಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಲು ಸರಗಳ್ಳತನ: ಆರೋಪಿ ಬಂಧನ