ಮನೆ ಕ್ರೀಡೆ 3ನೇ ಟಿ20 ಪಂದ್ಯ ಮಳೆಯಿಂದ ರದ್ದು: ಐರ್ಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ

3ನೇ ಟಿ20 ಪಂದ್ಯ ಮಳೆಯಿಂದ ರದ್ದು: ಐರ್ಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ

0

ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯನ್ನು ಟೀಮ್ ಇಂಡಿಯಾ 2-0 ಅಂತರದಿಂದ ಗೆದ್ದುಕೊಂಡಿದೆ. ಡಬ್ಲಿನ್ ನ ಮಲಾಹೈಡ್ ನಲ್ಲಿ ನಡೆಯಬೇಕಿದ್ದ ಮೂರನೇ ಟಿ20 ಪಂದ್ಯವು ಮಳೆಯ ಕಾರಣ ರದ್ದಾಗಿದ್ದು, ಇದರೊಂದಿಗೆ ಸರಣಿಯು ಟೀಮ್ ಇಂಡಿಯಾ ಪಾಲಾಗಿದೆ.

3ನೇ ಟಿ20 ಪಂದ್ಯದ ಆರಂಭಕ್ಕೆ ಮಳೆ ಅಡ್ಡಿ ಆಗಿತ್ತು. ಇದಾದ ಬಳಿಕ ಕಟ್ ಆಫ್ ಟೈಮ್ ತನಕ ಕಾಯಲಾಯಿತು. ಮಳೆಯಿಂದ ಮೈದಾನದ ಮೇಲ್ಮೈ  ಒದ್ದೆಯಾಗಿದ್ದ ಪರಿಣಾಮ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ. ಅದರಂತೆ ಮೊದಲೆರಡು ಪಂದ್ಯಗಳಲ್ಲಿ 2-0 ಅಂತರದಿಂದ ಗೆದ್ದು ಸರಣಿ  ವಶಪಡಿಸಿಕೊಂಡಿದ್ದ  ಟೀಮ್ ಇಂಡಿಯಾ ಟ್ರೋಫಿಯನ್ನು ಗೆದ್ದಿತ್ತು.

ಭಾರತ ತಂಡ: ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ(ನಾಯಕ), ರವಿ ಬಿಷ್ಣೋಯ್, ಅವೇಶ್ ಖಾನ್, ಜಿತೇಶ್ ಶರ್ಮಾ, ಮುಖೇಶ್ ಕುಮಾರ್ , ಶಹಬಾಝ್ ಅಹಮದ್.

ಐರ್ಲೆಂಡ್ ತಂಡ: ಆಂಡ್ರ್ಯೂ ಬಾಲ್ಬಿರ್ನಿ, ಪಾಲ್ ಸ್ಟಿರ್ಲಿಂಗ್ (ನಾಯಕ), ಲೋರ್ಕನ್ ಟಕರ್ (ವಿಕೆಟ್ ಕೀಪರ್), ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಮಾರ್ಕ್ ಅಡೇರ್, ಬ್ಯಾರಿ ಮೆಕ್ಕಾರ್ಥಿ, ಕ್ರೇಗ್ ಯಂಗ್, ಜೋಶುವಾ ಲಿಟಲ್, ಬೆಂಜಮಿನ್ ವೈಟ್, ಫಿಯಾನ್ ಹ್ಯಾಂಡ್, ಥಿಯೋ ವ್ಯಾನ್ ವೋರ್ಕಾಮ್, ಗೆರೆತ್ ಡೆಲಾನಿ, ರಾಸ್ ಅಡೈರ್.

ಹಿಂದಿನ ಲೇಖನತುಮಕೂರು ಜಿಲ್ಲೆಯಲ್ಲಿ ಮತ್ತೊಂದು ಮೈಲಿಗೆ ಸಂಪ್ರದಾಯ: ಮಗು, ಬಾಣಂತಿಯನ್ನು ಮನೆಗೆ ಸೇರಿಸಿದ ನ್ಯಾಯಧೀಶರು
ಮುಂದಿನ ಲೇಖನನೂತನ ಅಪರ ಜಿಲ್ಲಾಧಿಕಾರಿಯಾಗಿ ಶಿವರಾಜು ಪಿ. ಅಧಿಕಾರ ಸ್ವೀಕಾರ