ಬಳ್ಳಾರಿ : ಬಳ್ಳಾರಿ ಇಂದಿರಾ ನಗರದ ನಿವಾಸಿ ಮಹೇಶ ಅವರ ಸಿಂಗಲ್ ಬೆಡ್ ರೂಮ್ ಮನೆಗೆ ಈ ತಿಂಗಳು 4,25,852 ರೂ.ಬಿಲ್ ಬಂದಿದ್ದು, ಇದನ್ನು ಕಂಡ ಗ್ರಾಹಕ ಮಹೇಶ್ ಹೌಹಾರಿದ್ದಾರೆ.
ಜೆಸ್ಕಾಂ ಸಿಬ್ಬಂದಿ ಮನೆಗೆ ಬಂದು ಬಿಲ್ ಕೊಟ್ಟು ಹೋಗಿದ್ದಾರೆ. ಪ್ರತಿ ತಿಂಗಳು ನಮ್ಮ ಮನೆಗೆ 1,700 ರೂ. ಬರುತ್ತಿತ್ತು. ಆದರೆ ಈ ಬಾರಿ ಇಷ್ಟೊಂದು ಬಿಲ್ ಬಂದಿದೆ ಎಂದು ಮಹೇಶ್ ತಿಳಿಸಿದ್ದಾರೆ.
ಇನ್ನು ಇಷ್ಟೊಂದು ವಿದ್ಯುತ್ ಬಿಲ್ ಕಂಡ ಸಿಬ್ಬಂದಿ ಮನೆಗೆ ಕೊಟ್ಟ ವಾಪಸ್ ಪಡೆದು, ಆನ್-ಲೈನ್ ನಲ್ಲಿ ಬಿಲ್ ಚೆಕ್ ಮಾಡಿಕೊಂಡು ಬಿಲ್ ಪಾವತಿ ಮಾಡಿ ಎಂದು ಹೇಳಿ ಹೋಗಿದ್ದಾರೆ. ಅದರಂತೆ ಆನ್ -ಲೈನ್ ನಲ್ಲೂ ಚೆಕ್ ಮಾಡಿದಾಗ ನಾಲ್ಕು ಲಕ್ಷ ಬಿಲ್ ತೋರಿಸಿದೆ.
ಈ ಬಗ್ಗೆ ಮಹೇಶ್ ಅವರು ದೂರು ನೀಡಿದ ಬಳಿಕ, ಮತ್ತೆ ಇಂದು (ಜೂನ್ 10) ಮನೆಗೆ ಬಂದ ಬೆಸ್ಕಾಂ ಸಿಬ್ಬಂದಿ ಮರುಪರೀಕ್ಷೆ ಮಾಡಿ ಎಂದಿನಂತೆ 885 ಬಿಲ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.