ಮನೆ ರಾಜ್ಯ ಬಂಧಿತ ಐವರು ಶಂಕಿತ ಉಗ್ರರ ಪೈಕಿ ಓರ್ವನ ನಿವಾಸದಲ್ಲಿ 4 ಹ್ಯಾಂಡ್​​ ಗ್ರೆನೇಡ್​ ಪತ್ತೆ: ಪೊಲೀಸರಲ್ಲಿ...

ಬಂಧಿತ ಐವರು ಶಂಕಿತ ಉಗ್ರರ ಪೈಕಿ ಓರ್ವನ ನಿವಾಸದಲ್ಲಿ 4 ಹ್ಯಾಂಡ್​​ ಗ್ರೆನೇಡ್​ ಪತ್ತೆ: ಪೊಲೀಸರಲ್ಲಿ ಆತಂಕ

0

ಬೆಂಗಳೂರು: ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ಬಂಧನಕ್ಕೊಳಗಾಗಿದ್ದ ಐವರು ಶಂಕಿತ ಉಗ್ರರ ಪೈಕಿ ಒಬ್ಬನ ನಿವಾಸದಲ್ಲಿ ಹ್ಯಾಂಡ್​​ ಗ್ರೆನೇಡ್​ ಪತ್ತೆಯಾಗಿರುವುದು ಪೊಲೀಸರಲ್ಲಿ ಆತಂಕಕ್ಕೆ ಕಾರಣವಾಗಿದೆ.

Join Our Whatsapp Group

ಶಂಕಿತ ಉಗ್ರ ಜಾಹೀದ್​​ ನ ಕೊಡಿಗೆಹಳ್ಳಿಯಲ್ಲಿರುವ ಮನೆಯಲ್ಲಿ 4 ಗ್ರೆನೇಡ್ ಪತ್ತೆಯಾಗಿದೆ. ಈವರೆಗೂ ರಾಜ್ಯದಲ್ಲಿ ಜೀವಂತ ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿರಲಿಲ್ಲ ಎನ್ನಲಾಗಿದೆ. ಆದರೆ, ಇದೀಗ ಸಿಲಿಕಾನ್ ಸಿಟಿಯಲ್ಲಿ ಒಂದೇ ಬಾರಿಗೆ ನಾಲ್ಕು ಸಜೀವ ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿದೆ.