ಬೆಂಗಳೂರು : ರಾಜ್ಯ ಸರ್ಕಾರ 40 ಡಿವೈಎಸ್ಪಿ ಮತ್ತು 71 ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಮೈಸೂರು ಗ್ರಾಮಾಂತರ ಉಪ ವಿಭಾಗದ ಡಿವೈಎಸ್ಪಿ ಪೂರ್ಣಚಂದ್ರ ತೇಜಸ್ವಿ ಅವರನ್ನ ಕರ್ನಾಟಕ ಲೋಕಾಯುಕ್ತ ಗೆ ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಳಕ್ಕೆ ಸಿಐಡಿ ಯಲ್ಲಿದ್ದ ಅಬ್ದುಲ್ ಕರೀಂ ರಾವುತರ್ ಅವರನ್ನು ವರ್ಗಾಯಿಸಲಾಗಿದೆ.
ಮೈಸೂರು ಜಿಲ್ಲಾ ಡಿ.ಸಿ.ಆರ್.ಬಿ ಡಿವೈಎಸ್ಪಿ ಎ.ಆರ್ ಸಮಿತ್ ಅವರನ್ನು ಕರ್ನಾಟಕ ಗುಪ್ತವಾರ್ತೆಗೆ ವರ್ಗಾಯಿಸಲಾಗಿದೆ. ಮೈಸೂರಿನ ನಜರ್ ಬಾದ್ ಇನ್ಸ್ಪೆಕ್ಟರ್ ಕೆ.ಜೀವನ್ ಅವರನ್ನು ಲೋಕಾಯುಕ್ತಾಗೆ ವರ್ಗಾಯಿಸಲಾಗಿದ್ದು, ಅವರ ಸ್ಥಳಕ್ಕೆ ಮಡಿಕೇರಿ ಚೆಸ್ಕಾಂ ಜಾಗ್ರತ ದಳದ ಇನ್ಸ್ಪೆಕ್ಟರ್ ಎಂ.ಮಹದೇವಸ್ವಾಮಿ ಅವರನ್ನು ವರ್ಗಾವಣೆ ಮಾಡಲಾಗಿದೆ.
ಕರ್ನಾಟಕದ ಗುಪ್ತವಾರ್ತೆ ವರ್ಗಾವಣೆ ಆದೇಶದಲ್ಲಿದ್ದ ವಿವೇಕಾನಂದ ಅವರನ್ನ ವಿ.ವಿ. ಪುರಂ ಠಾಣೆಗೆ ನಿಯೋಜಿಸಲಾಗಿದ್ದು, ಅಲ್ಲಿದ್ದ ಮೋಹನ್ ಕುಮಾರ್ ಅವರನ್ನು ಲೋಕಾಯುಕ್ತಾಗೆ ವರ್ಗಾವಣೆ ಮಾಡಲಾಗಿದೆ. ಸ್ಥಳ ನಿರೀಕ್ಷೆಯಲ್ಲಿದ್ದ ಎನ್.ಮುನಿಯಪ್ಪ ಅವರನ್ನು ಹುಣಸೂರು ಗ್ರಾಮಾಂತರ ಠಾಣೆಗೆ ವರ್ಗಾಯಿಸಿದ್ದು, ಮೈಸೂರು ನಗರ ಸಿಟಿಎಸ್ಬಿ ವರ್ಗಾವಣೆ ಆದೇಶದಲ್ಲಿದ್ದ ಸಿ.ಶಿವನಂಜ ಶೆಟ್ಟಿ ಅವರನ್ನು ಮೈಸೂರು ಗ್ರಾಮಾಂತರ ಠಾಣೆಗೆ ವರ್ಗಾವಣೆ ಮಾಡಲಾಗಿದ್ದು, ಅಲ್ಲಿದ್ದ ಜಿ.ಎಸ್ ಸ್ವರ್ಣ ಅವರನ್ನು ಚಿಕ್ಕಮಗಳೂರು ಜಿಲ್ಲೆ ಬಸವನಹಳ್ಳಿ ವೃತ್ತಕ್ಕೆ ವರ್ಗಾಯಿಸಲಾಗಿದೆ.