ಮನೆ ಅಪರಾಧ ಕಂಪನಿಗೆ ಗ್ರಾಹಕರು ಪಾವತಿಸಿದ 43.69 ಲಕ್ಷ ವಂಚನೆ: ಸೇಲ್ಸ್ ರೆಪ್ರೆಸೆಂಟೇಟಿವ್ ವಿರುದ್ಧ ಪ್ರಕರಣ ದಾಖಲು

ಕಂಪನಿಗೆ ಗ್ರಾಹಕರು ಪಾವತಿಸಿದ 43.69 ಲಕ್ಷ ವಂಚನೆ: ಸೇಲ್ಸ್ ರೆಪ್ರೆಸೆಂಟೇಟಿವ್ ವಿರುದ್ಧ ಪ್ರಕರಣ ದಾಖಲು

0

ಮೈಸೂರು : ಖಾಸಗಿ ಕಂಪನಿಯೊಂದಕ್ಕೆ ಗ್ರಾಹಕರು ಪಾವತಿಸಿದ 43.69 ಲಕ್ಷ ರೂಗಳನ್ನು ಕಂಪನಿಗೆ ಜಮೆ ಮಾಡದೇ ವಂಚಿಸಿರುವ ಆರೋಪದ ಮೇರೆಗೆ ಸೇಲ್ಸ್ ರೆಪ್ರಸೆಂಟೇಟಿವ್ ವಿರುದ್ಧ ಪ್ರಕರಣ ದಾಖಲಾಗಿದೆ.       

Join Our Whatsapp Group

ಲಲಿತಾದ್ರಿಪುರ ನಿವಾಸಿ ಎಂ.ರವಿ 28 ಆರೋಪಕ್ಕೆ ಗುರಿಯದವನಾಗಿದ್ದು, ಈತ ಮೈಸೂರಿನ ಚಾಮುಂಡಿಪುರಂನ ಮನೋಹನ ಪಾರ್ಕ್ ಎದುರಿಗಿರುವ ‘ಆಟೋ ಮಾರ್ಕ್’ ಎಂಬ ಕಂಪನಿಯ ಸೇಲ್ಸ್ ರೆಪ್ರೆಸೆಂಟಿವ್ ಆಗಿ 2021ರ ಏಪ್ರಿಲ್ ಒಂದರಿಂದ 2023ರ ಫೆಬ್ರವರಿ 28ರ ವರೆಗೆ ಕೆಲಸ ಮಾಡಿದ್ದು, ಈ ಅವಧಿಯಲ್ಲಿ ಕಂಪನಿಗೆ ಗ್ರಾಹಕರು ಪಾವತಿಸಿದ 43,69,871 ರೂಗಳನ್ನು ಕಂಪನಿಗೆ ಜಮಾ ಮಾಡದೇ ವಂಚಿಸಿದ್ದಾನೆ ಎಂದು ಕಂಪನಿ ಮಾಲೀಕ ಮಂಗಳೂರಿನ ವಿ.ವಿಲಾಸ್ಕುಮಾರ ನೀಡಿದ ದೂರನ್ನು ದಾಖಲಿಸಿಕೊಂಡಿರುವ ಲಕ್ಷ್ಮಿಪುರಂ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.