ನವದೆಹಲಿ(Newdelhi): ದೆಹಲಿಯ ಎಎಪಿ ಸರ್ಕಾರವು ತನ್ನ ಆಸ್ಪತ್ರೆ ಮತ್ತು ಆರೋಗ್ಯ ಕೇಂದ್ರಗಳಲ್ಲಿ 450 ಬಗೆಯ ವೈದ್ಯಕೀಯ ಪರೀಕ್ಷೆಗಳನ್ನು ಜನವರಿ 1 ರಿಂದ ಉಚಿತವಾಗಿ ನಡೆಸಲಿದೆ.
ಈ ಪೈಕಿ ಈಗಾಗಲೇ 212 ಬಗೆಯ ವೈದ್ಯಕೀಯ ಪರೀಕ್ಷಾ ಸೇವೆಯನ್ನು ದೆಹಲಿ ಸರ್ಕಾರ ಉಚಿತವಾಗಿ ನೀಡುತ್ತಿದೆ. ತನ್ನ ಆಸ್ಪತ್ರೆ ಮತ್ತು ಮೊಹಲ್ಲಾ ಕ್ಲಿನಿಕ್’ಗಳಲ್ಲಿ ಹೆಚ್ಚುವರಿಯಾಗಿ 238 ಪರೀಕ್ಷೆಗಳನ್ನು ಉಚಿತವಾಗಿ ನಡೆಸುವ ಕುರಿತು ಆರೋಗ್ಯ ಇಲಾಖೆಯಿಂದ ಬಂದಿದ್ದ ಪ್ರಸ್ತಾವಕ್ಕೆ ಕೇಜ್ರಿವಾಲ್ ಸಹಿ ಮಾಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉತ್ತಮ ಆರೋಗ್ಯ ಮತ್ತು ಗುಣಮಟ್ಟದ ಶಿಕ್ಷಣ ಎಲ್ಲರಿಗೂ ದೊರೆಯಬೇಕು ಎಂಬುದು ನಮ್ಮ ಆಶಯ. ಆರೋಗ್ಯ ಚಿಕಿತ್ಸೆಯಂತೂ ಈಗ ದುಬಾರಿಯಾಗಿದೆ. ಈ ಕಾರಣದಿಂದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದು ಸಾಕಷ್ಟು ಜನರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ನಮ್ಮ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರದಿಂದ ಹೆಚ್ಚಿನ ಜನರಿಗೆ ಅನುಕೂಲವಾಗುತ್ತದೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಈ ಸೌಲಭ್ಯ ದೆಹಲಿಯ ಜನರಿಗೆ ಮಾತ್ರ ದೊರೆಯಲಿದೆ.














