Saval TV on YouTube
ಮುಂಬೈ: ಮಹಿಳೆಯರ ಕ್ರಿಕೆಟ್ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್) ಚೊಚ್ಚಲ ಆವೃತ್ತಿಯ ಐದು ತಂಡಗಳ ಮಾರಾಟದಿಂದ ಬಿಸಿಸಿಐ 4669.99ಕೋಟಿ ಆದಾಯ ಗಳಿಸಿದೆ.
ಅದಾನಿ ಸಮೂಹದ ಅದಾನಿ ಸ್ಫೋರ್ಟ್ ಲೈನ್ ಅತ್ಯಂತ ದುಬಾರಿ ಫ್ರಾಂಚೈಸಿಯಾಗಿದ್ದು, 1,289 ಕೋಟಿ ನೀಡಿ ತಂಡವನ್ನು ಖರೀದಿಸಿದೆ.
ಅಹಮದಾಬಾದ್ ಫ್ರಾಂಚೈಸಿ ಅದಾನಿ ಸಮೂಹದ ಪಾಲಾಗಿದ್ದು, ಪುರುಷರ ಐಪಿಎಲ್’ನ ಮುಂಬೈ ಇಂಡಿಯನ್ಸ್, ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಗಳು ಕ್ರಮವಾಗಿ 912.99 ಕೋಟಿ, 901 ಕೋಟಿ ಮತ್ತು 810 ನೀಡಿ ತಂಡಗಳನ್ನು ಖರೀದಿಸುವ ಮೂಲಕ ಡಬ್ಲ್ಯುಪಿಎಲ್’ಗೆ ಪ್ರವೇಶ ಪಡೆದಿದ್ದಾರೆ.
ಕ್ಯಾಪ್ರಿ ಗ್ಲೋಬಲ್ ಹೋಲ್ಡಿಂಗ್ಸ್ 757 ಕೋಟಿಗೆ ಲಖನೌ ಫ್ರಾಂಚೈಸಿ ಪಡೆದುಕೊಂಡಿದೆ.ಈ ತಿಂಗಳ ಆರಂಭದಲ್ಲಿ ಬಿಸಿಸಿಐ 951 ಕೋಟಿಗೆ ಮಾಧ್ಯಮ ಪ್ರಸಾರ ಹಕ್ಕನ್ನು ವಯಕಾಮ್18ಗೆ ಮಾರಾಟ ಮಾಡಿತ್ತು. ಪ್ರತಿ ಪಂದ್ಯಕ್ಕೆ 7.09 ಕೋಟಿಯಂತೆ ಐದು ವರ್ಷಗಳಿಗೆ ಈ ಹರಾಜು ನಡೆದಿತ್ತು.