ಹಾಸನ (Hassan)- ಪಡಿತರ ಅಕ್ಕಿ ದಂಧೆಯಲ್ಲಿ 471 ಚೀಲ ಅಕ್ಕಿ ಸಹಿತ ಲಾರಿಯನ್ನು ವಶಪಡಿಸಿಕೊಂಡಿರುವ ಘಟನೆ ನಗರದ ಅರಸೀಕೆರೆ ಯಲ್ಲಿ ನಡೆದಿದೆ.
ನಗರದ ಅರಸೀಕೆರೆ ರಸ್ತೆಯ ಕೈಗಾರಿಕಾ ಪ್ರದೇಶದ ಗೋದಾಮಿನಲ್ಲಿ ಅಕ್ಕಿ ಹಾಗೂ ಲಾರಿಯನ್ನು ವಶಪಡಿಸಿಕೊಂಡಿದ್ದು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.
ಲಾರಿಯನ್ನು ನಿಲ್ಲಿಸಿಕೊಂಡು ಪಡಿತರ ಅಕ್ಕಿ ಇಳಿಸಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಅಕ್ರಮ ಖಚಿತಪಡಿಸಿಕೊಂಡ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದರು. ದೂರು ನೀಡಿ ಇಲಾಖಾ ವಿಚಾರಣೆ ನಡೆಸುವುದಾಗಿ ತಿಳಿಸಿದ್ದು, ಅಕ್ರಮದ ಜಾಲ ಹಿಡಿಯಲು ಪೊಲೀಸರು ಮುಂದಾಗಿದ್ದಾರೆ.
ಲಾರಿಯಲ್ಲಿದ್ದ ನೂರಾರು ಮೂಟೆ ಅಕ್ಕಿ ಚೀಲದಲ್ಲಿ ಅರ್ಧದಷ್ಟನ್ನು ಹೊರ ರಾಜ್ಯದ ಕೂಲಿ ಕಾರ್ಮಿಕರು ಗೋದಾಮಿಗೆ ಇಳಿಸಿದ್ದು, ಕೆಲ ಗಂಟೆ ಕಳೆದಿದ್ದರೆ ಅಕ್ಕಿಚೀಲ ಬದಲಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಕುವೆಂಪುನಗರ ಬಡಾವಣೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸ್ಥಳಕ್ಕೆ ಸಿಪಿಐ ಕೃಷ್ಣರಾಜು, ಆಹಾರ ಇಲಾಖೆ ಅಧಿಕಾರಿಗಳು ಆಗಮಿಸಿದ್ದರು.