ಬೆಂಗಳೂರು : ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ಆಯ್ಕೆಯಾಗಿರುವ ತಮನ್ನಾ ಭಾಟಿಯಾಗೆ ಸರ್ಕಾರ 6.20 ಕೋಟಿ ರೂ. ಪಾವತಿಸಿದೆ. ಈ ಪ್ರಶ್ನೆಯ ಜೊತೆಗೆ ಈ ಜಾಹೀರಾತಿಗಾಗಿ ಯಾವ ಯಾವ ರಾಯಭಾರಿಗಳನ್ನು ಬಳಸಿಕೊಳ್ಳಲಾಗಿದೆ ಮತ್ತು ಅವರಿಗೆ ಇದುವರೆಗೂ ನೀಡಲಾಗಿರುವ ಸಂಭಾವನೆಯೆಷ್ಟು ಎಂದು ಪ್ರಶ್ನಿಸಿದ್ದರು.
ಕಳೆದ 2 ವರ್ಷಗಳ ಅವಧಿಯಲ್ಲಿ ಮೈಸೂರು ಸ್ಯಾಂಡಲ್ ಸೋಪ್ನ ಜಾಹೀರಾತು ಮತ್ತು ಪ್ರಚಾರಕ್ಕಾಗಿ 48,88,21,350 ರೂ. ವೆಚ್ಚ ಮಾಡಲಾಗಿದೆ. ದೇಶ ಮತ್ತು ವಿದೇಶಿ ಮಾರುಕಟ್ಟೆಗಳಲ್ಲಿ ಮೈಸೂರು ಸ್ಯಾಂಡಲ್ ಸೋಪ್ನ ಜಾಹೀರಾತು ಮತ್ತು ಪುಚಾರಕ್ಕಾಗಿ ಸಂಸ್ಥೆಯು ರಾಯಭಾರಿಗಳನ್ನು ನೇಮಕ ಮಾಡಿದೆ.

ತಮನ್ನಾ ಭಾಟಿಯಾ (2025-27) – 6.20 ಕೋಟಿ ರೂ., ಐಷಾನಿ ಶೆಟ್ಟಿ (2025-27) – 15 ಲಕ್ಷ ರೂ. ನೀಡಲಾಗಿದೆ. ಇವರಲ್ಲದೇ ಕರ್ನಾಟಕ ಮೂಲದ ಸ್ಥಳೀಯ ವ್ಯಕ್ತಿಗಳಾದ ನಿಮಿಕಾ ರತ್ನಾಕರ್, ಶ್ರೀನಿವಾಸ್ ಮೂರ್ತಿ, ಸಾನ್ಯಾ ಐಯ್ಯರ್, ಆರಾಧನಾ.ಆರ್ ಇವರುಗಳನ್ನು ದೂರದರ್ಶನ ಜಾಹೀರಾತುಗಳಲ್ಲಿ ಛಾಯಾ ಚಿತ್ರೀಕರಣ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ರೀಲ್ಸ್ನಲ್ಲಿ ಬಳಲಾಗಿದೆ. ಒಟ್ಟು ಈ ಕೆಲಸಕ್ಕೆ 62.87 ಲಕ್ಷ ರೂ. ವೆಚ್ಚ ತಗುಲಿದೆ ಎಂದು ಸರ್ಕಾರ ಉತ್ತರ ನೀಡಿದೆ.















