ಮನೆ ರಾಷ್ಟ್ರೀಯ ಲೋಕಸಭೆ ಚುನಾವಣೆಯ 4ನೇ ಹಂತದ: 9 ಗಂಟೆ ವೇಳೆಗೆ ಶೇ. 10.35ರಷ್ಟು ಮತದಾನ

ಲೋಕಸಭೆ ಚುನಾವಣೆಯ 4ನೇ ಹಂತದ: 9 ಗಂಟೆ ವೇಳೆಗೆ ಶೇ. 10.35ರಷ್ಟು ಮತದಾನ

0

ನವದೆಹಲಿ: ಲೋಕಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನ ಪ್ರಕ್ರಿಯೆ ಮುಂದುವರೆದಿದ್ದು, ಸೋಮವಾರ ಬೆಳಗ್ಗೆ 9 ಗಂಟೆ ವೇಳೆಗೆ ಶೇ. 10.35ರಷ್ಟು ಮತದಾನವಾಗಿದೆ ಎಂದ ತಿಳಿದುಬಂದಿದೆ,

Join Our Whatsapp Group

10 ರಾಜ್ಯಗಳ 96 ಲೋಕಸಭಾ ಕ್ಷೇತ್ರ, ಆಂಧ್ರಪ್ರದೇಶ ವಿಧಾನಸಭೆಯ ಎಲ್ಲಾ 175 ಕ್ಷೇತ್ರ ಮತ್ತು ಒಡಿಶಾ ವಿಧಾನಸಭೆಯ 28 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

ಆಂಧ್ರಪ್ರದೇಶ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ, ಉತ್ತರಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಈ ವರೆಗೂ ಶ.10.35ರಷ್ಟು ಮತದಾನವಾಗಿದೆ.

ಆಂಧ್ರ ಪ್ರದೇಶ: ಶೇ.9.05

ಬಿಹಾರ: ಶೇ.10.18

ಜಮ್ಮು ಮತ್ತು ಕಾಶ್ಮೀರ: ಶೇ.5.07

ಜಾರ್ಖಂಡ್: ಶೇ.11.78

ಮಧ್ಯಪ್ರದೇಶ: ಶೇ.14.97

ಮಹಾರಾಷ್ಟ್ರ: ಶೇ.6.45

ಒಡಿಶಾ: ಶೇ.9.23

ತೆಲಂಗಾಣ: ಶೇ.9.51

ಉತ್ತರ ಪ್ರದೇಶ: ಶೇ.11.67

ಪಶ್ಚಿಮ ಬಂಗಾಳ: ಶೇ.15.24

ಇದರೊಂದಿಗೆ ಅತೀ ಹೆಚ್ಚು ಮತದಾನ ಪಶ್ಚಿಮ ಬಂಗಾಳದಲ್ಲಿ (ಶೇ.15.24) ನಡೆದಿದ್ದು, ಕಡಿಮೆ ಮತದಾನ ಶೇ.5.07ರೊಂದಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ದಾಖಲಾಗಿದೆ.

ಚಿತ್ತೂರು ಜಿಲ್ಲೆಯಲ್ಲಿ ಅಪಹರಣಕ್ಕೊಳಗಾಗಿದ್ದ ಟಿಡಿಪಿಯ ಮೂವರು ಮತಗಟ್ಟೆ ಏಜೆಂಟರನ್ನು ಪತ್ತೆ ಹಚ್ಚಿ, ರಕ್ಷಿಸಲಾಗಿದೆ ಎಂದು ಆಂಧ್ರಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಮುಖೇಶ್ ಕುಮಾರ್ ಮೀನಾ ಅವರು ತಿಳಿಸಿದ್ದಾರೆ.

ಪುಂಗನೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಚಿತ್ತೂರು ಜಿಲ್ಲೆಯ ಸೇಡಂ ಮಂಡಲದ ಬೋಕರಮಂಡ ಗ್ರಾಮದಿಂದ ಟಿಡಿಪಿ ಏಜೆಂಟರನ್ನು ಅಪಹರಣ ಮಾಡಲಾಗಿದ್ದು, ‘ಮತಗಟ್ಟೆ 188, 189 ಮತ್ತು 199ಕ್ಕೆ ಸೇರಿದ ಟಿಡಿಪಿ ಏಜೆಂಟರನ್ನು ವೈಎಸ್‌ಆರ್‌ಸಿಪಿ ಮುಖಂಡರು ಮತಗಟ್ಟೆಗೆ ಹೋಗುವಾಗ ಅಪಹರಿಸಿದ್ದಾರೆ ಎಂದು ಟಿಡಿಪಿ ಜಿಲ್ಲಾ ಉಸ್ತುವಾರಿ ಜಗನ್ ಮೋಹನ್ ರಾಜು ದೂರು ನೀಡಿದ್ದರು ಎಂದು ಹೇಳಿದ್ದಾರೆ.

4ನೇ ಹಂತದಲ್ಲಿ ಜಮ್ಮು ಮತ್ತು ಕಾಶ್ಮೀರದ ಒಂದು ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದ್ದು, ಪ್ರತಿ ಬೂತ್‌ ನಲ್ಲಿ ಬಿಗಿ ಭಧ್ರತೆ ಕಲ್ಪಿಸಲಾಗಿದೆ. ಪುಲ್ವಾಮ, ಬುದ್ಗಾವ್‌ನಲ್ಲಿ ಮತದಾನ ನಡೆಯುತ್ತಿದ್ದು, ಭದ್ರತಾ ಪಡೆಗಳು ಬಿಗಿ ಬಂದೊಬಸ್ತ್ ಕಲ್ಪಿಸಿವೆ.