ಮನೆ ಅಂತರಾಷ್ಟ್ರೀಯ ಬಾಹ್ಯಾಕಾಶದಲ್ಲಿ 5.5 ಗಂಟೆ ನಡಿಗೆ: ಸುನಿತಾ ವಿಲಿಯಮ್ಸ್‌, ಬುಚ್‌ ವಿಲ್‌ ಮೋರ್‌ ಹೊಸ ದಾಖಲೆ

ಬಾಹ್ಯಾಕಾಶದಲ್ಲಿ 5.5 ಗಂಟೆ ನಡಿಗೆ: ಸುನಿತಾ ವಿಲಿಯಮ್ಸ್‌, ಬುಚ್‌ ವಿಲ್‌ ಮೋರ್‌ ಹೊಸ ದಾಖಲೆ

0

ವಾಷಿಂಗ್ಟನ್‌: ನಾಸಾ ಗಗನಯಾನಿಗಳಾದ ಸುನಿತಾ ವಿಲಿಯಮ್ಸ್‌ ಮತ್ತು ಬುಚ್‌ ವಿಲ್‌ಮೋರ್‌ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಹೊರಬಂದು ಸುಮಾರು 5.5 ಗಂಟೆಗಳ ಕಾಲ ಆಕಾಶದಲ್ಲಿ ನಡೆಯುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.

Join Our Whatsapp Group

ಈ ಹಿಂದಿಗಿಂತಲೂ ಇದು ದೀರ್ಘ ನಡಿಗೆಯಾಗಿದೆ. ಸುನಿತಾ ಅವರು 9 ಬಾರಿ ಬಾಹ್ಯಾಕಾಶದಲ್ಲಿ ಹೆಜ್ಜೆ ಹಾಕಿದ್ದಾರೆ. ಆ ಮೂಲಕ ಅವರು 62 ಗಂಟೆ, 6 ನಿಮಿಷಗಳ ಬಾಹ್ಯಾಕಾಶದಲ್ಲಿ ನಡೆದ ದಾಖಲೆ ಹೊಂದಿದ್ದಾರೆ.

ವಿಲ್‌ಮೋರ್ ಅವರು ಈವರೆಗೂ 5 ಬಾರಿ ನಡೆದಿದ್ದಾರೆ.

ಈ ನಡಿಗೆಯಲ್ಲಿ ಸುನಿತಾ ಹಾಗೂ ವಿಲ್‌ಮೋರ್ ಅವರು ರೇಡಿಯೊ ಫ್ರೀಕ್ವೆನ್ಸಿ ಗ್ರೂಮ್ ಆ್ಯಂಟೆನಾವನ್ನು ತೆಗೆದು, ಅದರಲ್ಲಿ ಸಂಗ್ರಹವಾದ ಹೊರಗಿನ ವಸ್ತುಗಳ ಮಾದರಿಯನ್ನು ಡೆಸ್ಟಿನಿ ಪ್ರಯೋಗಾಲಯ ಹಾಗೂ ಕ್ವೆಸ್ಟ್‌ ಏರ್‌ಲಾಕ್‌ಗೆ ಕಳುಹಿಸಿದ್ದಾರೆ ಎಂದು ನಾಸಾ ಹೇಳಿದೆ.

2024ರ ಜೂನ್‌ನಲ್ಲಿ ಬೋಯಿಂಗ್‌ ಸ್ಟಾರ್‌ಲೈನರ್‌ ಮೂಲಕ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಈ ಇಬ್ಬರು ಗಗನಯಾನಿಗಳು, ತಾಂತ್ರಿಕ ಸಮಸ್ಯೆಯಿಂದ ಅಲ್ಲಿಯೇ ಉಳಿದಿದ್ದಾರೆ. ಇವರನ್ನು ಸುರಕ್ಷಿತವಾಗಿ ಧರೆಗೆ ಕರೆತರಲು ಇಲಾನ್ ಮಸ್ಕ್ ಒಡೆತನದ ಸ್ಪೇಸ್‌ ಎಕ್ಸ್‌ ನೆರವು ಕೇಳಲಾಗಿದೆ.

ಎಂಟು ದಿನಗಳಿಗಷ್ಟೇ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಇವರಿಬ್ಬರು, ತಾಂತ್ರಿಕ ಸಮಸ್ಯೆಯಿಂದ ಅಲ್ಲಿಯೇ ಉಳಿದಿದ್ದಾರೆ. ಬೋಯಿಂಗ್‌ ಪ್ರತಿಸ್ಪರ್ಧಿಯಾದ ಸ್ಪೇಸ್‌ ಎಕ್ಸ್‌ ಕಂಪನಿಯು ಈ ಇಬ್ಬರು ಗಗನಯಾನಿಗಳು 2025ರ ಫೆಬ್ರುವರಿಯಲ್ಲಿ ಕರೆತರಲಿದೆ ಎಂದು ನಾಸಾ ಹೇಳಿತ್ತು. ಆದರೆ ಈ ಕಾರ್ಯಕ್ಕಾಗಿ ಹೊಸ ಬಗೆಯ ನೌಕೆಯನ್ನು ಸಿದ್ಧಪಡಿಸುತ್ತಿರುವ ಸ್ಪೇಸ್‌ ಎಕ್ಸ್‌, ಮತ್ತಷ್ಟು ವಿಳಂಬವಾಗಲಿದೆ ಎಂದಿದೆ.

ಇಬ್ಬರು ಗಗನಯಾನಿಗಳನ್ನು ಶೀಘ್ರದಲ್ಲಿ ಸುರಕ್ಷಿತವಾಗಿ ಕರೆತರುವ ಕೆಲಸವನ್ನು ಸ್ಪೇಸ್‌ ಎಕ್ಸ್‌ ಮಾಡಲಿದೆ ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದರು.