ಮನೆ ಸುದ್ದಿ ಜಾಲ 5 ಕೆಜಿ ನಿಯಮ ಬಾಹಿರ ಪ್ಲಾಸ್ಟಿಕ್ ವಶ

5 ಕೆಜಿ ನಿಯಮ ಬಾಹಿರ ಪ್ಲಾಸ್ಟಿಕ್ ವಶ

0

ಮೈಸೂರು: ನಿಯಮ ಬಾಹಿರವಾಗಿ ಪರಿಸರ ವಿರೋಧಿ  ಪ್ಲಾಸ್ಟಿಕ್‌ ಮಾರಾಟ ನಡೆಸುತ್ತಿದ್ದ ಮಳಿಗೆಗಳ ವಿರುದ್ಧ ಪರಿಸರ ಅಭಿಯಂತರ ಅಧಿಕಾರಿಗಳು ದಾಳಿ‌ ನಡೆಸಿ 5 ಕೆ.ಜಿ.ಪ್ಲಾಸ್ಟಿಕ್ ವಶಕ್ಕೆ ಪಡೆದುಕೊಂಡರು.

ಪರಿಸರ ಅಭಿಯಂತರರು ಎ.ಶಿಲ್ಪಶ್ರೀ ನೇತೃತ್ವದಲ್ಲಿ ಒಂದನೇ ವಲಯ ಕಚೇರಿ 55ನೇ ವಾರ್ಡಿನ ವ್ಯಾಪ್ತಿಯ  ವಿದ್ಯಾರಣ್ಯ ಪುರಂ ಅಂಗಡಿಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದರು.

ಈ ವೇಳೆ ಮಾತನಾಡಿದ ಅವರು, 10 ಅಂಗಡಿಗಳ ಮೇಲೆ ದಾಳಿ ನಡೆಸಿ 5 ಕೆಜಿ ಪ್ಲಾಸ್ಟಿಕ್ ವಶಕ್ಕೆ ಪಡೆದಿದ್ದೇವೆ. ಇದೇ ರೀತಿ ಅನಧಿಕೃತ ಪ್ಲಾಸ್ಟಿಕ್ ಮಾರಾಟ ಕೈಗೊಂಡರೆ ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದ ದಂಡ ವಿಧಿಸುವ ಎಚ್ಚರಿಕೆ ನೀಡಿದರು. ಮೇಲ್ಛಾವಣೆ ಉಸ್ತುವಾರಿ‌ ಶೇಖರ್ ಹಾಗೂ ಇನ್ನಿತರ ಸಿಬ್ಬಂದಿಗಳು ಉಪಸ್ಥಿತರಿದ್ದರು.