ಮನೆ ಅಪರಾಧ ಕಟಾವಿಗೆ ಬಂದಿದ್ದ 50 ಎಕರೆ ಕಬ್ಬು ಬೆಂಕಿಗಾಹುತಿ: ರೈತರು ಕಂಗಾಲು

ಕಟಾವಿಗೆ ಬಂದಿದ್ದ 50 ಎಕರೆ ಕಬ್ಬು ಬೆಂಕಿಗಾಹುತಿ: ರೈತರು ಕಂಗಾಲು

0

ಧಾರವಾಡ: ಕಟಾವಿಗೆ ಬಂದು ನಿಂತಿದ್ದ 50-60 ಎಕರೆಯ ಕಬ್ಬು ಬೆಳೆ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾದ ಘಟನೆ ತಾಲೂಕಿನ ದೇವಗಿರಿ ಗ್ರಾಮದಲ್ಲಿ
ಬುಧವಾರ ನಡೆದಿದೆ.


ಶಾರ್ಟ್ ಸರ್ಕೀಟ್‌ನಿಂದ ಮಧ್ಯಾಹ್ನದ ಹೊತ್ತಿಗೆ ಬೆಟಗೇರಿ ಕುಟುಂಬದ ಹೊಲದ ಕಬ್ಬಿಗೆ ಬೆಂಕಿ ಹೊತ್ತಿಕೊಂಡಿದೆ. ಇದಾದ ಬಳಿಕ ಅಕ್ಕ-ಪಕ್ಕದ ಹೊಲಗಳಿಗೂ ಬೆಂಕಿ ಹರಡಿಸಿದ್ದು, ಹೀಗಾಗಿ ಬೆಂಕಿ ನಿಯಂತ್ರಣಕ್ಕೆ ಗ್ರಾಮಸ್ಥರು ಮಾಡಿದ ಎಲ್ಲ ಪ್ರಯತ್ನಗಳು ವಿಫಲಗೊಂಡವು. ಕೊನೆಗೆ 50-60 ಎಕರೆಗೂ ವಿಸ್ತರಿಸಿದ ಬೆಂಕಿಯು ಕಟಾವಿಗೆ ಬಂದಿದ್ದ ಇಡೀ ಕಬ್ಬನ್ನು ಆಹುತಿ ಪಡೆದಿದೆ.


ಈ ಬೆಂಕಿ ಅನಾಹುತದಲ್ಲಿ ಬೆಟಗೇರಿ, ಧಾರವಾಡ, ರಾಥೋಳ್ಳಿ, ಕುರ್ತಿಕೋಟಿ ಸೇರಿದಂತೆ ವಿವಿಧ ಕುಟುಂಬಗಳ ಕಬ್ಬು ಸಂಪೂರ್ಣ ಬೆಂಕಿಗಾಹುತಿಯಾಗಿದೆ.
ಪ್ರತಿ ಎಕರೆಗೆ 40 ಟನ್ ಕಬ್ಬು ಸಾಮರ್ಥ್ಯದಂತೆ 50-60 ಎಕರೆಯ 2000 ಟನ್‌ಗಳೂ ಹೆಚ್ಚು ಕಬ್ಬು ಹಾಳಾಗಿದ್ದು, ಈ ಮೂಲಕ ಕಬ್ಬು ಬೆಳೆಗಾರರ ಆರ್ಥಿಕ ಸ್ಥಿತಿಗೆ ನೇರ ಹೊಡೆತ ಬಿದ್ದಾಂತಾಗಿದೆ. ಈ ಮೂಲಕ 50 ಲಕ್ಷಕ್ಕೂ ಅಧಿಕ ಮೌಲ್ಯದ ಕಬ್ಬು ಬೆಂಕಿಗೆ ಆಹುತಿಯಾದಂತಾಗಿದೆ. ಶಾರ್ಟ್ ಸರ್ಕೀಟ್‌ನಿಂದ ತಗುಲಿದ ಬೆಂಕಿಯಿಂದ ನಮ್ಮ 10 ಎಕರೆಯ ಕಬ್ಬು ಹಾಳಾಗಿದ್ದು, 400 ಟನ್ ಕಬ್ಬು ನಮ್ಮ ಎದುರೇ ಬೆಂಕಿಯ ಪಾಲಾಗಿದೆ. ಆದಷ್ಟು ಬೇಗ ಪರಿಹಾರ ನೀಡಬೇಕು. ಶೇ.25 ರಷ್ಟು ಪರಿಹಾರ ಕಡಿತ ಮಾಡದೇ ಶೇ.100 ರಷ್ಟು ಪರಿಹಾರ ನೀಡಬೇಕೆಂದು ದೇವಗಿರಿಯ ರೈತ ನಾರಾಯಣ ಬೆಟಗೇರಿ ಆಗ್ರಹಿಸಿದ್ದಾರೆ.