ಮನೆ ಸುದ್ದಿ ಜಾಲ ಕನಕದಾಸರ 535ನೇ ಜಯಂತ್ಯುತ್ಸವ: ಗಮನಸೆಳೆದ ಮೆರವಣಿಗೆ

ಕನಕದಾಸರ 535ನೇ ಜಯಂತ್ಯುತ್ಸವ: ಗಮನಸೆಳೆದ ಮೆರವಣಿಗೆ

0

ಮೈಸೂರು(Mysuru): ‘ಮಹಾನ್ ಸಂತ ಭಕ್ತ ಕನಕದಾಸ ಸೇವಾ ಸಮಿತಿ’ ಮತ್ತು ಕನಕ ಯುವ ಸೇನಾ ಸಹಯೋಗದಲ್ಲಿ ಕನಕದಾಸರ 535ನೇ ಜಯಂತ್ಯುತ್ಸವದ ಅಂಗವಾಗಿ ಶನಿವಾರ ನಡೆದ ಮೆರವಣಿಗೆ ಸಾರ್ವಜನಿಕರ ಕಣ್ಮನ ಸೆಳೆಯಿತು.

ಕನಕದಾಸ ಸೇರಿದಂತೆ ಎಲ್ಲ ಸಮುದಾಯದ ಮಹನೀಯರ ಫೋಟೊಗಳ ಮೆರವಣಿಗೆಗೆ ಜಾನಪದ ಕಲಾತಂಡಗಳ ನೃತ್ಯ ವೈಭವ ಮೆರುಗು ನೀಡಿತು.

ಸಾಹುಕಾರ್ ಚನ್ನಯ್ಯ ರಸ್ತೆಯಲ್ಲಿರುವ ಶ್ರೀಕೃಷ್ಣಧಾಮದ ಎದುರಿನಿಂದ ಆರಂಭವಾದ ಮೆರವಣಿಗೆಗೆ ಕಾಗಿನೆಲೆ ಶಾಖಾ ಮಠದ ಶಿವಾನಂದಪುರಿ ಸ್ವಾಮೀಜಿ, ಕಾಂಗ್ರೆಸ್ ಮುಖಂಡರಾದ ಎಂ.ಕೆ.ಸೋಮಶೇಖರ್, ಕೆ.ಮರೀಗೌಡ, ನಗರಪಾಲಿಕೆ ಸದಸ್ಯ ಜೆ.ಗೋಪಿ ಪುಷ್ಪನಮನ ಸಲ್ಲಿಸಿ ಚಾಲನೆ ನೀಡಿದರು.ಕನಕದಾಸ, ಬುದ್ಧ, ಬಸವಣ್ಣ, ಅಂಬೇಡ್ಕರ್, ಬಾಬು ಜಗಜೀವನ್ ರಾಂ, ಮಹರ್ಷಿ ವಾಲ್ಮೀಕಿ, ನಾರಾಯಣ ಗುರು, ಸಂಗೊಳ್ಳಿ ರಾಯಣ್ಣ, ಶಾಹು ಮಹಾರಾಜ್, ನಾಲ್ವಡಿ ಕೃಷ್ಣರಾಜ ಒಡೆಯರ್ ಮೊದಲಾದ ಸಮಾಜ ಸುಧಾರಕರ ಫೋಟೊಗಳನ್ನು ಮೆರವಣಿಗೆ ಮಾಡಲಾಯಿತು.

ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್, ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಬಿ.ಸುಬ್ರಹ್ಮಣ್ಯ, ಮುಖಂಡರಾದ ಕೆ.ಹರೀಶ್ ಗೌಡ, ಟಿ.ಬಿ.ಚಿಕ್ಕಣ್ಣ, ಪುಷ್ಪಲತಾ ಚಿಕ್ಕಣ್ಣ, ಡಿ.ನಾಗಭೂಷಣ್, ಎಂ.ಶಿವಣ್ಣ, ಜೆ.ಎಸ್.ಜಗದೀಶ್, ಹರೀಶ್ ಮೊಗಣ್ಣ, ರೇಖಾಪ್ರಿಯ, ನಾಗರಾಜು, ರೇವಣ್ಣ, ಭಕ್ತಕನಕದಾಸ ಸೇವಾ ಸಮಿತಿಯ ಮರಿಸ್ವಾಮಿ, ಬೀರೇಗೌಡ, ಮಹದೇವ, ರಾಜು, ಬಿ.ಬಸವರಾಜು, ರಮೇಶ್, ಕುನ್ನೇಗೌಡ, ಬಸವಯ್ಯ, ಮಹದೇವ, ವೆಂಕಟಪ್ಪ, ಕನಕ ಯುವ ಸಮಿತಿಯ ಬಿ.ಕುಮಾರ, ಸ್ವಾಮಿ, ರವಿಕುಮಾರ್, ಪಿ.ನಾಗರಾಜು ಇದ್ದರು.