ಮನೆ ಶಿಕ್ಷಣ ಮಾ.27 ರಿಂದ ಏ.1ರವರೆಗೆ 5, 8ನೇ ತರಗತಿ ಪರೀಕ್ಷೆ

ಮಾ.27 ರಿಂದ ಏ.1ರವರೆಗೆ 5, 8ನೇ ತರಗತಿ ಪರೀಕ್ಷೆ

0

ಬೆಂಗಳೂರು: ಹೈಕೋರ್ಟ್‌ ವಿಭಾಗೀಯ ಪೀಠದ ಆದೇಶದಂತೆ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು ಗುರುವಾರ ಪ್ರಕಟಿಸಿದೆ.

ಐದು ಮತ್ತು ಎಂಟನೇ ತರಗತಿ ಪರೀಕ್ಷೆಗಳು (ಮೌಲ್ಯಾಂಕನ) ಮಾರ್ಚ್‌ 27ರಿಂದ ಏಪ್ರಿಲ್‌ 1ರವರೆಗೆ ನಡೆಯಲಿವೆ.

ಐದನೇ ತರಗತಿಗೆ ಮಾರ್ಚ್‌ 27ರಿಂದ 30ರವರೆಗೆ ನಾಲ್ಕು ದಿನಗಳು, ಎಂಟನೇ ತರಗತಿಗೆ ಮಾರ್ಚ್‌ 27ರಿಂದ ಏಪ್ರಿಲ್‌ 1ರವರೆಗೆ 6 ದಿನಗಳು ಪರೀಕ್ಷೆಗಳು ನಡೆಯಲಿವೆ.

ಮಾರ್ಚ್‌ 30ರ ಗಣಿತ ಪರೀಕ್ಷೆ ಬೆಳಿಗ್ಗೆ 10.30ರಿಂದ 12.30ರವರೆಗೆ, ಉಳಿದ ಎಲ್ಲ ವಿಷಯಗಳ ಪರೀಕ್ಷೆ ಪ್ರತಿದಿನ ಮಧ್ಯಾಹ್ನ 2.30ರಿಂದ 4.30ರವರೆಗೆ ಪ್ರಸ್ತುತ ಮಕ್ಕಳು ಓದುತ್ತಿರುವ ಆಯಾ ಶಾಲೆಗಳಲ್ಲೇ ನಡೆಯುತ್ತವೆ.

ಎಂಟನೇ ತರಗತಿಗೆ 27ರಂದು ಪ್ರಥಮ ಭಾಷೆ, 28ರಂದು ದ್ವಿತೀಯ ಭಾಷೆ, 29ರಂದು ತೃತೀಯ ಭಾಷಾ ವಿಷಯಗಳು, 30ರಂದು ಗಣಿತ, 31ರಂದು ವಿಜ್ಞಾನ ಹಾಗೂ ಏ.1ರಂದು ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯುತ್ತವೆ.

ಹಿಂದಿನ ಲೇಖನಮುಲ್ಕಿ ನಗರ ಪಂಚಾಯತ್‌’ನ ಜೂ.ಇಂಜಿನಿಯರ್ ಗೆ 4 ವರ್ಷ ಜೈಲು
ಮುಂದಿನ ಲೇಖನಎಪಿಎಂಸಿ ದಾಸ್ತಾನು ಮಳಿಗೆ ಮೇಲೆ ಸಿಸಿಬಿ ಪೊಲೀಸರ ದಾಳಿ: ಐವರ ಬಂಧನ, 450 ಚೀಲ ಅಕ್ಕಿ; 5 ಲಕ್ಷ ನಗದು ವಶ