ಮನೆ ಅಂತಾರಾಷ್ಟ್ರೀಯ ಅಂಡಮಾನ್ ಮತ್ತು ನಿಕೋಬಾರ್ ಸಮುದ್ರ ತೀರದಲ್ಲಿ 6.1 ರಷ್ಟು ತೀವ್ರತೆಯ ಭೂಕಂಪ

ಅಂಡಮಾನ್ ಮತ್ತು ನಿಕೋಬಾರ್ ಸಮುದ್ರ ತೀರದಲ್ಲಿ 6.1 ರಷ್ಟು ತೀವ್ರತೆಯ ಭೂಕಂಪ

0

ಅಂಡಮಾನ್ ಮತ್ತು ನಿಕೋಬಾರ್: ನಸುಕಿನಜಾವ ಬಂಗಾಳಕೊಲ್ಲಿಯಲ್ಲಿರುವ ಅಂಡಮಾನ್ ಸಮುದ್ರ ತೀರದಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.1 ರಷ್ಟು ತೀವ್ರತೆ ದಾಖಲಾಗಿದೆ.

ಭೂಕಂಪದ ಕೇಂದ್ರ ಬಿಂದು ಭೂಮಿಯಿಂದ 75 ಕಿ.ಮೀ ಆಳದಲ್ಲಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿ (ಎನ್ಸಿಎಸ್) ಮಾಹಿತಿ ನೀಡಿದೆ.

ಭೂಕಂಪದ ನಂತರ ಯಾವುದೇ ಜೀವ ಅಥವಾ ಆಸ್ತಿ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.