ಮನೆ ಅಪರಾಧ ಹೂಡಿಕೆ ನೆಪದಲ್ಲಿ 6 ಕೋಟಿ ವಂಚನೆ: 10 ಜನ ಸೆರೆ

ಹೂಡಿಕೆ ನೆಪದಲ್ಲಿ 6 ಕೋಟಿ ವಂಚನೆ: 10 ಜನ ಸೆರೆ

0

ಬೆಂಗಳೂರು: ಆನ್‌ ಲೈನ್‌ ಜಾಬ್‌, ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಬೆಂಗಳೂರು ಸೇರಿ ದೇಶಾದ್ಯಂತ 6 ಕೋಟಿ ರೂ. ವಂಚಿಸಿದ ಬೆಂಗಳೂರಿನ 10 ಮಂದಿ ಆರೋಪಿಗಳನ್ನು ಉತ್ತರ ವಿಭಾಗದ ಸಿಇಎನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

Join Our Whatsapp Group

ಸೈಯದ್‌ ಯಹ್ಯಾ (32), ಉಮರ್‌ ಫಾರೂಕ್‌ (34), ಮೊಹಮ್ಮದ್‌ ಮಹೀನ್‌(32), ಮೊಹಮ್ಮದ್‌ ಮುಜಾಮಿಲ್‌(25), ತೇಜಸ್‌(35), ಚೇತನ್‌ (35), ವಾಸೀಂ (30), ಸೈಯದ್‌ ಝೈದ್‌(24), ಸಾಹಿ ಅಬ್ದಲ್‌ ಆನಾ (30), ಓಂಪ್ರಕಾಶ್‌(30) ಬಂಧಿತರು.

ಆರೋಪಿಗಳಿಂದ 1.74 ಲಕ್ಷ ರೂ. ನಗದು, 72 ಮೊಬೈಲ್‌ಗ‌ಳು, 182 ಡೆಬಿಟ್‌ ಕಾರ್ಡ್‌ಗಳು, 2 ಲ್ಯಾಪ್‌ಟಾಪ್‌ಗ್ಳು, 133 ಸಿಮ್‌ಕಾರ್ಡ್‌ಗಳು, 127 ಬ್ಯಾಂಕ್‌ ಪಾಸ್‌ ಬುಕ್‌ಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳೆಲ್ಲರೂ ಆರ್‌.ಟಿ.ನಗರ, ಹೆಬ್ಟಾಳ, ಕೆ.ಜಿ.ಹಳ್ಳಿ, ಸಂಪಿಗೆಹಳ್ಳಿ ವ್ಯಾಪ್ತಿಯವರಾಗಿದ್ದಾರೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಟಿ.ದಾಸರಹಳ್ಳಿ ನಿವಾಸಿಯೊಬ್ಬರಿಗೆ ಜೂನ್‌ 20ರಂದು ಆರೋಪಿಗಳು ವಾಟ್ಸ್‌ಆ್ಯಪ್‌ ಮೂಲಕ ಸಂಪರ್ಕಿಸಿ ಆನ್‌ಲೈನ್‌ ಜಾಬ್‌ ನೀಡುವುದಾಗಿ ಭರವಸೆ ನೀಡಿದ್ದಾರೆ. ನಂತರ ವಾಟ್ಸ್‌ಆ್ಯಪ್‌ಗೆ ಕೆಲ ಲಿಂಕ್‌ಗಳನ್ನು ಕಳುಹಿಸಿ, ಟೆಲಿಗ್ರಾಂ ಗ್ರೂಪ್‌ಗೆ ದೂರುದಾರರನ್ನು ಸೇರಿಸಿ, ಕೆಲ ಟಾಸ್ಕ್ ಗಳನ್ನು ನೀಡಿದ್ದಾರೆ. ಐಷಾರಾಮಿ ಹೋಟೆಲ್‌ಗ‌ಳ ರಿವ್ಯೂವ್‌ ಮಾಡುವಂತೆ ತಿಳಿಸಿ, ಅದಕ್ಕಾಗಿ ದೂರುದಾರನೇ 150-200 ರೂ. ಹೂಡಿಕೆ ಮಾಡಿ ರಿವ್ಯೂ ಕಳುಹಿಸಿದ್ದಾನೆ. ಅದಕ್ಕೆ ಪ್ರತಿಯಾಗಿ ಆರೋಪಿಗಳು 400-500 ರೂ. ನೀಡುತ್ತಿದ್ದರು. ಬಳಿಕ ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್‌ ಇನ್‌ವೆಸ್ಟ್‌ಮೆಂಟ್‌ನಿಂದ ಲಾಭ ಹೆಚ್ಚಾಗಲಿದೆ ಎಂದು ನಂಬಿಸಿ, ದೂರುದಾರರಿಂದ ಜೂನ್‌ 20ರಿಂದ ಜುಲೈ 1ರವರೆಗೆ 25.37 ಲಕ್ಷ ರೂ. ವರ್ಗಾಯಿಸಿಕೊಂಡಿದ್ದಾರೆ. ಕೆಲ ದಿನಗಳ ದಿನಗಳ ಬಳಿಕ ತಾನೂ ವಂಚನೆಗೊಳಗಾಗಿರುವುದನ್ನು ಅರಿತ ದೂರುದಾರ ಕೂಡಲೇ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದರು. ಈ ಸಂಬಂಧ ತನಿಖೆ ನಡೆಸಿ ಬ್ಯಾಂಕ್‌ ಖಾತೆಗಳ ಮಾಹಿತಿ ಆಧರಿಸಿ 7 ಮಂದಿಯನ್ನು ಆರ್‌ .ಟಿ.ನಗರದಲ್ಲಿ ಬಂಧಿಸಿ, ನಗದು, ಮೊಬೈಲ್‌ಗ‌ಳು, ಬ್ಯಾಂಕ್‌ ಪಾಸ್‌ಗಳು, ಸಿಮ್‌ಕಾರ್ಡ್‌ಗಳನ್ನು ವಶಕ್ಕೆ ಪಡೆಯಲಾಯಿತು.

ಈ ಆರೋಪಿಗಳ ವಿಚಾರಣೆಯಲ್ಲಿ ಇತರೆ ಮೂವರು ಆರೋಪಿಗಳ ಹೆಸರನ್ನು ಬಾಯಿಬಿಟ್ಟಿದ್ದು, ಅವರು ಚೀನಾಕ್ಕೆ ಹೋಗಿರುವ ಮಾಹಿತಿ ನೀಡಿದ್ದರು ಎಂದು ಪೊಲೀಸ್‌ ಆಯುಕ್ತರು ಮಾಹಿತಿ ನೀಡಿದರು.