ಮನೆ ಅಪರಾಧ ಷಡಕ್ಷರಿ ಮಠದ ಸ್ವಾಮೀಜಿಗೆ 6 ಕೋಟಿ ರೂ. ಹನಿಟ್ರ್ಯಾಪ್‌ ಕೇಸ್‌: ಮೂವರು ಸಿಸಿಬಿ ವಶಕ್ಕೆ

ಷಡಕ್ಷರಿ ಮಠದ ಸ್ವಾಮೀಜಿಗೆ 6 ಕೋಟಿ ರೂ. ಹನಿಟ್ರ್ಯಾಪ್‌ ಕೇಸ್‌: ಮೂವರು ಸಿಸಿಬಿ ವಶಕ್ಕೆ

0

ಬೆಂಗಳೂರು: ತಿಪಟೂರು ಷಡಕ್ಷರಿ ಮಠದ ರುದ್ರಮುನಿ ಸ್ವಾಮೀಜಿ ಹನಿಟ್ರ್ಯಾಪ್ ಮಾಡಿ 6 ಕೋಟಿ ರೂ.ಗೆ ಬೇಡಿಕೆಯಿಟ್ಟ ಆರೋಪದಡಿ ಸಿಸಿಬಿ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.

Join Our Whatsapp Group

ವಿದ್ಯಾ ಬಿರಾದರ್‌, ಆಕೆಯ ಸಹಚರರಾದ ಗಗನ್‌, ಸೂರ್ಯನಾರಾಯಣ್‌ ಬಂಧಿತರು. ರುದ್ರಮುನಿ ಸ್ವಾಮಿಜಿಯ ಖಾಸಗಿ ವಿಡಿಯೋದ ಪೆನ್‌ಡ್ರೈವ್‌ ತೋರಿಸಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಒಟ್ಟು 6 ಕೋಟಿ ರೂ. ನೀಡುವಂತೆ ಬೇಡಿಕೆಯಿಟ್ಟಿದ್ದರು. ಹಣ ಕೊಡದಿದ್ದರೆ ಜಾಲತಾಣಗಳಲ್ಲಿ ಖಾಸಗಿ ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು.

ಷಡಕ್ಷರಿ ಮಠದ ಸ್ವಾಮೀಜಿಗೆ ತಕ್ಷಣಕ್ಕೆ 50 ಲಕ್ಷ ರೂ. ಹಣ ನೀಡುವಂತೆ ಕೇಳಿಕೊಂಡಿದ್ದರು ಎನ್ನಲಾಗಿದೆ. ಇತ್ತ ಷಡಕ್ಷರಿ ಮಠದ ರುದ್ರಮುನಿ ಸ್ವಾಮೀಜಿ ಸಿಸಿಬಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.