ಮನೆ ಸುದ್ದಿ ಜಾಲ ಆಂಧ್ರ ಪ್ರದೇಶದಲ್ಲಿ ಭೀಕರ ಅಪಘಾತ: 6 ಮಂದಿ ಮೃತ; 10 ಮಂದಿಗೆ ಗಾಯ

ಆಂಧ್ರ ಪ್ರದೇಶದಲ್ಲಿ ಭೀಕರ ಅಪಘಾತ: 6 ಮಂದಿ ಮೃತ; 10 ಮಂದಿಗೆ ಗಾಯ

0

ಪಲ್ನಾಡು(ಆಂಧ್ರ ಪ್ರದೇಶ) Palnadu (Andhra Pradesh)- ಭೀಕರ ಅಪಘಾತ ಸಂಭವಿಸಿ ಆರು ಮಂದಿ ಮೃತಪಟ್ಟು, 10 ಮಂದಿ ಗಾಯಗೊಂಡಿರುವ ಘಟನೆ ಸೋಮವಾರ ನಸುಕಿನ ಜಾವ ಆಂಧ್ರ ಪ್ರದೇಶದ ಪಲ್ನಾಡು ಜಿಲ್ಲೆಯಲ್ಲಿ ಸಂಭವಿಸಿದೆ.

ಟ್ರಕ್ ಮತ್ತು ನಿಂತಿದ್ದ ಲಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. ಗಾಯಗೊಂಡವರನ್ನು ನರಸರೌಪೆಟ್ ನಲ್ಲಿರುವ ಗುರ್ಜಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗುರ್ಜಾಲ ಡಿಎಸ್ ಪಿ ಜಯರಾಮ್ ತಿಳಿಸಿದ್ದಾರೆ.

ನಿನ್ನೆ ಅಯೋಧ್ಯೆಗೆ ಹೋಗುತ್ತಿದ್ದ ಕರ್ನಾಟಕದ ವ್ಯಾನ್ ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಹಿಳೆಯರು ಸೇರಿದಂತೆ ಏಳು ಮಂದಿ ಮೃತಪಟ್ಟು, ಇತರ 9 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಬಹ್ರೈಚ್-ಲಖಿಂಪುರ ಹೆದ್ದಾರಿಯಲ್ಲಿ ನಡೆದಿತ್ತು.

ಹಿಂದಿನ ಲೇಖನರಾಜ್ಯದಲ್ಲಿ 241 ಮಂದಿಗೆ ಕೊರೊನಾ ಸೋಂಕು
ಮುಂದಿನ ಲೇಖನಪಿಎಸ್‌ಐ ನೇಮಕಾತಿ ಅಕ್ರಮ: ಸಿಐಡಿಯಿಂದ ಮಧ್ಯವರ್ತಿಗಳ ಪಟ್ಟಿ ಸಿದ್ಧ