ಬೆಂಗಳೂರು: ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಆರೋಪಪಟ್ಟಿಯಿಂದ ಕೈ ಬಿಟ್ಟ ಆರೋಪ ಹಾಗೂ ಠಾಣೆಯಲ್ಲಿ ಭಾರೀ ಭ್ರಷ್ಟಾಚಾರ ಮಾಡಿದ ಆರೋಪದ ಮೇರೆಗೆ ಪೂರ್ವವಿಭಾಗದ ರಾಮ ಮೂರ್ತಿನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್, ಸಬ್ ಇನ್ ಸ್ಪೆಕ್ಟರ್ ಸೇರಿ ಆರು ಅಧಿ ಕಾರಿ ಹಾಗೂ ಸಿಬ್ಬಂದಿಯನ್ನು ಅಮಾನತುಗೊಳಿಸಿ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಎನ್. ಸತೀಶ್ ಕುಮಾರ್ ಆದೇಶಿಸಿದ್ದಾರೆ.
ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಎಚ್.ಮುತ್ತುರಾಜ್, ಪಿಎಸ್‌ಐ ಉಮೇಶ್, ಸಹಾಯಕ ಸಬ್ ಇನ್ ಸ್ಪೆಕ್ಟರ್ ಫೈರೋಜ್ ಖಾನ್ ಮತ್ತು ಮಹೇಶ್ ಮತ್ತು ಹೆಡ್ ಕಾನ್‌ಸ್ಟೆಬಲ್ ಮಂಜುನಾಥ್, ಕಾನ್‌ಸ್ಟೇಬಲ್ ಬಸವರಾಜ ಅಳ್ಳೊಳ್ಳಿ ಅಮಾನತುಗೊಂಡವರು.
ಕೊಲೆ ಪ್ರಕರಣವೊಂದರಲ್ಲಿ ಆರೋಪಿ ಗೌರವ್ ಎಂಬಾತನನ್ನು ಬಂಧಿಸದೆ, ಆರೋಪಪಟ್ಟಿಯಲ್ಲೂ ಆತ ನನ್ನು ಕೈ ಬಿಟ್ಟಿದ್ದಾರೆ. ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪಿಗಳಿಂದ ಹಣ ಪಡೆದು ಬಿಟ್ಟಿರುವುದೂ ಅಲ್ಲದೆ, ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಯಿಂದ ಹಣ ಪಡೆದು ಠಾಣೆಯಿಂದ ವಾಪಸ್ ಕಳುಹಿಸಿರುವ ಪ್ರಮುಖ ಆರೋಪಗಳು ಕೇಳಿ ಬಂದಿದ್ದವು.
ಈ ಸಂಬಂಧ ಮೇಲಧಿಕಾರಿಗಳು ವರದಿ ತಯಾರಿಸಿ ಪೊಲೀಸ್ ಆಯುಕ್ತರಿಗೆ ನೀಡಿದ್ದರು. ಪರಿ ಶೀಲನೆಯಲ್ಲಿ ಠಾಣಾಧಿಕಾರಿ ಸೇರಿ ಆರು ಮಂದಿ ಠಾಣೆ ಯಲ್ಲೇ ಭಾರೀ ಭ್ರಷ್ಟಾಚಾರ ಮತ್ತು ಕರ್ತವ್ಯ ಲೋಪ ಎಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಅಮಾನತು ಮಾಡಿ ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ.
ಸಾಕ್ಷ್ಯ ನಾಶಪಡಿಸುವ ಸಾಧ್ಯತೆ: ಪೊಲೀಸ್ ಇನ್ ಸ್ಪೆಕ್ಟರ್ ಹಾಗೂ ಸಿಬ್ಬಂದಿ ವಿರುದ್ಧ ಕೇಳಿ ಬಂದಿರುವ ಆರೋಪಗಳು ಗಂಭೀರ ಸ್ವರೂಪದ್ದಾಗಿದ್ದು, ಪೊಲೀಸ್ ಇಲಾಖೆಯ ಘನತೆಗೆ ಧಕ್ಕೆ ತರುವಂತಾದ್ದಾಗಿದೆ. ಈ ಹಿನ್ನೆಲೆಯಲ್ಲಿ ಆರು ಮಂದಿಯನ್ನು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸ್ಥಳದಲ್ಲಿ ಮುಂದುವರಿಸಿದಲ್ಲಿ ಸಾಕ್ಷಿದಾರರಿಗೆ ಬೆದರಿಕೆ ಒಡ್ಡುವ ಮತ್ತು ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇರುತ್ತದೆ. ರಾಜ್ಯ ಪೊಲೀಸ್ (ಶಿಸ್ತು ನಡವಳಿಗಳು) ನಿಯಮಗಳ ಪ್ರಕಾರ ಇವರನ್ನು ಸೇವೆಯಿಂದ ಅಮಾನತ್ತಿನಲ್ಲಿಡುವುದು ಸೂಕ್ತವೆಂದು ತೀರ್ಮಾನಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖೀಸಲಾಗಿದೆ.
ಠಾಣಾಧಿಕಾರಿ ಮುತ್ತುರಾಜ್ ಮತ್ತು ಟೀಮ್ ವಿರುದ್ಧ ಸೆಪ್ಟೆಂಬರ್ ನಲ್ಲೇ ರಾಮಮೂರ್ತಿನಗರ ಠಾಣೆಯ ಕೆಲ ಅಧಿ ಕಾರಿ-ಸಿಬ್ಬಂದಿ ಹಿರಿಯ ಅಧಿಕಾರಿಗಳು ಅನಾಮ ಧೇಯ ಪತ್ರ ಬರೆದಿದ್ದರು. ಈ ಪತ್ರದಲ್ಲಿ ಠಾಣಾಧಿಕಾರಿ ಮುತ್ತುರಾಜ್ ಹಾಗೂ ಆತನ ತಂಡ ಎಸಗುತ್ತಿದ್ದ ದೌರ್ಜನ್ಯ, ಭ್ರಷ್ಟಾಚಾರ, ಮಹಿಳಾ ಸಿಬ್ಬಂದಿ ಜತೆ ಅಸಭ್ಯ ವರ್ತನೆ ಬಗ್ಗೆ ಉಲ್ಲೇಖೀಸಿ ದೂರು ನೀಡಿದ್ದರು.