ಮನೆ ಕಾನೂನು 6 ಪ್ರತ್ಯೇಕ ಪ್ರಕರಣ: ಅಪ್ರಾಪ್ತರಿಗೆ ವಾಹನ ನೀಡಿದ್ದ ಪೋಷಕರಿಗೆ ತಲಾ 25 ಸಾವಿರ ರೂ. ದಂಡ

6 ಪ್ರತ್ಯೇಕ ಪ್ರಕರಣ: ಅಪ್ರಾಪ್ತರಿಗೆ ವಾಹನ ನೀಡಿದ್ದ ಪೋಷಕರಿಗೆ ತಲಾ 25 ಸಾವಿರ ರೂ. ದಂಡ

0

ಬೆಂಗಳೂರು: ಅಪ್ರಾಪ್ತರಿಗೆ ವಾಹನ ನೀಡಿ ಅಪಘಾತ ಜತೆಗೆ ಅಪಾಯಕಾರಿ ವ್ಹೀಲಿಂಗ್‌ ಮಾಡಲು ಪರೋಕ್ಷ ಕಾರಣವಾಗಿದ್ದ ಆರು ಪ್ರತ್ಯೇಕ ಪ್ರಕರಣಗಳಲ್ಲಿ ಪೋಷಕರಿಗೆ ಕೋರ್ಟ್‌ ತಲಾ 25 ಸಾವಿರ ರೂ. ದಂಡ ವಿಧಿಸಿದೆ.

ಅಪಾಪ್ತರಿಗೆ ವಾಹನ ನೀಡದಂತೆ ಸಂಚಾರ ಪೊಲೀಸರು ನಿರಂತರವಾಗಿ ಜಾಗೃತಿ ಮೂಡಿಸಿದ್ದರೂ ನಿರ್ಲಕ್ಷ್ಯ ತೋರಿಸಿ ಮಕ್ಕಳಿಗೆ ದ್ವಿಚಕ್ರವಾಹನ ನೀಡಿದ್ದರು. ಅಜಾಗರೂಕತೆಯಿಂದ ಇಬ್ಬರು ಮಕ್ಕಳು ಮೂರು ಅಪಘಾತ ವೆಸಗಲು ಕಾರಣರಾದರೆ, ಇನ್ನು ಮೂರು ವಾಹನ ಸವಾರರು ಅಪಾಯಕಾರಿ ವ್ಹೀಲಿಂಗ್‌ ಮಾಡಿ ಸಂಚಾರ ನಿಯಮ ಉಲಂಘಿಸಿ ದ್ದರು. ಈ ಸಂಬಂಧ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ಕಳೆದ ವರ್ಷ ಪ್ರತ್ಯೇಕ ಆರು ಪ್ರಕರಣಗಳನ್ನು ದಾಖಲಿಸಿ ಬಾಲ ನ್ಯಾಯಮಂಡಳಿಗೆ ಅಪ್ರಾಪ್ತ ವಾಹನ ಸವಾರರ ಪೋಷಕರ ವಿರುದ್ಧ ಚಾರ್ಜ್‌ ಶೀಟ್‌ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯ 18 ವರ್ಷದೊಳಗಿನ ಮಕ್ಕಳಿಗೆ ದ್ವಿಚಕ್ರ ವಾಹನ ಸವಾರ ಮಾಡಲು ಅವಕಾಶ ನೀಡಿದ ಆರು ಮಂದಿ ಪೋಷಕರಿಗೆ ತಲಾ 25 ಸಾವಿರ ರೂ. ನಂತೆ 1,50 ಲಕ್ಷ ರೂ. ದಂಡ ವಿಧಿಸಿದೆ.

ಅಪ್ರಾಪ್ತ ವಾಹನ ಸವಾರರ ವಿರುದ್ಧ ಕಾರ್ಯಾಚರಣೆ ನಿರಂತರ ವಾಗಿ ಮುಂದುವರಿಸಲಾಗಿದೆ ಎಂದು ಪಶ್ವಿ‌ಮ ವಲಯದ ಸಂಚಾರ ಡಿಸಿಪಿ ಅನಿತಾ ಬಿ.ಹದ್ದಣನವರ್‌ ತಿಳಿಸಿದ್ದಾರೆ.