ಮನೆ ರಾಜ್ಯ 67 ಐಎಎಸ್, 62 ಐಪಿಎಸ್, 21 ಐಎಫ್ಎಸ್ ಅಧಿಕಾರಿಗಳಿಗೆ ವೇತನ ಶ್ರೇಣಿ ಪದೋನ್ನತಿ

67 ಐಎಎಸ್, 62 ಐಪಿಎಸ್, 21 ಐಎಫ್ಎಸ್ ಅಧಿಕಾರಿಗಳಿಗೆ ವೇತನ ಶ್ರೇಣಿ ಪದೋನ್ನತಿ

0

ಬೆಂಗಳೂರು: ಹೊಸ ವರ್ಷಾಚರಣೆ  ಸಂದರ್ಭದಲ್ಲಿ ಹಲವು ಐಎಎಸ್ ಹಾಗೂ ಐಪಿಎಸ್, ಐಎಫ್ಎಸ್ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಶುಭ ಸುದ್ದಿ ನೀಡಿದ್ದು, ವೇತನ ಶ್ರೇಣಿಯೊಂದಿಗೆ ಪದೋನ್ನತಿ, ಮುಂಬಡ್ತಿ ನೀಡಿದೆ.

Join Our Whatsapp Group

67 ಐಎಎಸ್ ಅಧಿಕಾರಿಗಳಿಗೆ ವೇತನ ಶ್ರೇಣಿಯೊಂದಿಗೆ ಪದೋನ್ನತಿ ನೀಡಿ ಆದೇಶ ಹೊರಡಿಸಲಾಗಿದೆ.‌ ಜನವರಿ 1ರಿಂದ ವೇತನ ಶ್ರೇಣಿ ಪದೋನ್ನತಿ ಅನ್ವಯವಾಗುತ್ತದೆ.

62 ಐಪಿಎಸ್ ಅಧಿಕಾರಿಗಳಿಗೆ ವೇತನ ಶ್ರೇಣಿಯೊಂದಿಗೆ ಪದೋನ್ನತಿ ನೀಡಲಾಗಿದ್ದರೆ, 3 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಕೆಲವರಿಗೆ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ.

21 ಐಎಫ್​ಎಸ್ ಅಧಿಕಾರಿಗಳಿಗೆ ವೇತನ ಶ್ರೇಣಿಯೊಂದಿಗೆ ಪದೋನ್ನತಿ ನೀಡಲಾಗಿದ್ದು, ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಐಜಿಪಿ ವಿಕಾಶ್ ಕುಮಾರ್ ವಿಕಾಶ್ (ಬೆಂಗಳೂರು ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತ), ರಮನ್ ಗುಪ್ತಾ (ಗುಪ್ತಚರ ವಿಭಾಗ, ಬೆಂಗಳೂರು) ವರ್ಗಾವಣೆ ಗೊಂಡವರು.

ಐಜಿಪಿಯಾಗಿ ಮುಂಬಡ್ತಿ:

ಚೇತನ್ ಸಿಂಗ್ ರಾಥೋಡ್ (ಐಜಿಪಿ, ಬೆಳಗಾವಿ ವಲಯ)

ಅಮಿತ್ ಸಿಂಗ್ (ಐಜಿಪಿ, ಮಂಗಳೂರು ವಲಯ)

ಎನ್.ಶಶಿಕುಮಾರ್ (ಹು-ಧಾ. ಪೊಲೀಸ್ ಆಯುಕ್ತ)

ವೈ.ಎಸ್.ರವಿಕುಮಾರ್ (ಗುಪ್ತಚರ ವಿಭಾಗದ ಭದ್ರತೆ)

ಸಿ.ವಂಶಿಕೃಷ್ಣ (ಡಿಐಜಿ, ನೇಮಕಾತಿ ವಿಭಾಗ).

ಎಸ್​ ಪಿಯಿಂದ ಡಿಐಜಿ

ಸೀಮಾ ಲಾಟ್ಕರ್ (ಮೈಸೂರು ನಗರ ಪೊಲೀಸ್ ಆಯುಕ್ತರು)

ಕಾರ್ತಿಕ್ ರೆಡ್ಡಿ (ಆಡಳಿತ ವಿಭಾಗ, ಪೊಲೀಸ್ ಪ್ರಧಾನ ಕಚೇರಿ)

ಕುಲದೀಪ್ ಕುಮಾರ್ ಆರ್ ಜೈನ್ (ಜಂಟಿ ಪೊಲೀಸ್ ಆಯುಕ್ತ, ಆಡಳಿತ ವಿಭಾಗ, ಬೆಂಗಳೂರು)

ಕೆ.ಸಂತೋಷ್ ಬಾಬು (ಗುಪ್ತಚರ ವಿಭಾಗ)

ಇಶಾ ಪಂತ್ (ಗುಪ್ತಚರ ವಿಭಾಗ)

ಜಿ.ಸಂಗೀತಾ (ಅರಣ್ಯ ಘಟಕ, ಸಿಐಡಿ)

ರೇಣುಕಾ ಸುಕುಮಾರ್ (ನಾಗರಿಕ ಹಕ್ಕು ಮತ್ತು ಜಾರಿ ನಿರ್ದೇಶನಾಲಯ ಬೆಂಗಳೂರು)

ಡಾ.ಭೀಮಾಶಂಕರ್ ಎಸ್ ಗುಳೇದ್ (ಎಸ್.ಪಿ ಬೆಳಗಾವಿ)

ರಾಹುಲ್ ಕುಮಾರ್ ಶಹಪುರ್‌ವಾಡ್ (ಎಸ್​ಪಿ, ಎನ್‌ಐಎ)

ಧಮೇಂದ್ರ ಕುಮಾರ್ ಮೀನಾ (ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ)

ಹೆಚ್.ಡಿ.ಆನಂದ್ ಕುಮಾರ್ (ಎಸ್​ಪಿ, ನಾಗರಿಕ ಹಕ್ಕು ಮತ್ತು ಜಾರಿ ನಿರ್ದೇಶನಾಲಯ ಬೆಂಗಳೂರು)

ಕಲಾಕೃಷ್ಣಮೂರ್ತಿ (ಅಸಿಸ್ಟೆಂಟ್ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್, ಪ್ರಧಾನ ಕಚೇರಿ ಬೆಂಗಳೂರು)

ಶ್ರೀನಿವಾಸ್ ಗೌಡ (ಡಿಸಿಪಿ, ಸಿಸಿಬಿ ಬೆಂಗಳೂರು)

ಸೈದುಲು ಅಡಾವತ್ (ಡಿಸಿಪಿ, ಉತ್ತರವಿಭಾಗ, ಬೆಂಗಳೂರು)

ಡಾ.ಸೌಮ್ಯಲತಾ ಎಸ್.ಕೆ (ಎಸ್.ಪಿ ರೈಲ್ವೆ)