ವೆಲ್ಲಿಂಗ್ಟನ್: ನ್ಯೂಜಿಲೆಂಡ್ ನಲ್ಲಿ ಸೋಮವಾರ 7.2 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿರುವುದು ವರದಿಯಾಗಿದೆ.
ನ್ಯೂಜಿಲೆಂಡ್ ಸಮೀಪದ ಕೆರ್ಮಾಡೆಕ್ ದ್ವೀಪಗಳ ಪ್ರದೇಶದಲ್ಲಿ ಸೋಮವಾರ ಮುಂಜಾನೆ ಭಾರತೀಯ ಕಾಲಮಾನದ ಪ್ರಕಾರ 6:11 ಗಂಟೆಗೆ ಭೂಕಂಪ ಸಂಭವಿಸಿದೆ.
7.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ.
ಭೂಕಂಪವು 10 ಕಿಮೀ ಆಳದಲ್ಲಿ ಸಂಭವಿಸಿದೆ. ಭೂಕಂಪದ ನಂತರ ಯುಎಸ್ ಸುನಾಮಿ ಎಚ್ಚರಿಕೆ ಸಿಸ್ಟಂನಿಂದ ಸುನಾಮಿ ಅಪಾಯದ ಮುನ್ಸೂಚನೆಯನ್ನು ನೀಡಲಾಗಿದೆ.
ಕಳೆದ ತಿಂಗಳು, ರಿಕ್ಟರ್ ಮಾಪಕದಲ್ಲಿ 7.1 ಅಳತೆಯ ಭೂಕಂಪವು ಕೆರ್ಮಾಡೆಕ್ ದ್ವೀಪಕ್ಕೆ ಅಪ್ಪಳಿಸಿತು.
ಸದ್ಯ ಭೂಕಂಪದಿಂದ ಯಾವುದೇ ಸಾವು ನೋವು ಆದ ಬಗ್ಗೆ ವರದಿಯಾಗಿಲ್ಲ.














