ಮನೆ ಆರೋಗ್ಯ ತುಮಕೂರಿನಲ್ಲಿ ಡೆಂಘಿಗೆ 7 ವರ್ಷದ ಬಾಲಕ ಸಾವು

ತುಮಕೂರಿನಲ್ಲಿ ಡೆಂಘಿಗೆ 7 ವರ್ಷದ ಬಾಲಕ ಸಾವು

0

ತುಮಕೂರು: ಡೆಂಘಿ ಜ್ವರಕ್ಕೆ ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಬಾಬೈಯನ ಗುಡಿಬೀದಿಯಲ್ಲಿ ಓರ್ವ ಬಾಲಕ ಬಲಿ ಆಗಿದ್ದಾನೆ.

Join Our Whatsapp Group

ಹರೀಶ್ ಕುಮಾರ್​ ಎನ್ನುವವರ ಪುತ್ರ ಕರುಣಾಕರ್​(7) ಮೃತ ಬಾಲಕ.

ಪಾವಗಡದ ಸುಧಾ ಕ್ಲಿನಿಕ್​ನಲ್ಲಿ ಬಾಲಕ ಕಳೆದ 8 ದಿನದಿಂದ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕೊನೆ ಕ್ಷಣದವರೆಗೂ ಡೆಂಘಿ ಜ್ವರ ಎಂದು ವೈದ್ಯರು ಪೋಷಕರಿಗೆ ತಿಳಿಸಿಲ್ಲ.

ಹೀಗಾಗಿ ವೈದ್ಯರ ನಿರ್ಲಕ್ಷ್ಯಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಧಾ ಕ್ಲಿನಿಕ್ ಮುಂದೆ ಪ್ರತಿಭಟನೆ ಮಾಡಲಾಗಿದೆ. ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.