ಶಿವಮೊಗ್ಗ: ರಾಜ್ಯದಲ್ಲಿ ಝಿಕಾ ವೈರಸ್ ಆತಂಕ ಹೆಚ್ಚಾಗುತ್ತಿದ್ದು, 74 ವರ್ಷದ ವೃದ್ಧರೊಬ್ಬರು ಶನಿವಾರ ಬಲಿಯಾಗಿದ್ದಾರೆ.
ಝಿಕಾ ವೈರಸ್ ಸೇರಿದಂತೆ ಬಹು ಅಂಗಾಂಗ ವೈಪಲ್ಯಗಳಿಂದ ಬಳಲುತ್ತಿದ್ದ ವೃದ್ಧ ಕಳೆದ ಹತ್ತು ದಿಮಗಳಿಂದ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.
ಕೇವಲ ಝಿಕಾ ವೈರಸ್ ಗೆ ವ್ಯಕ್ತಿ ಸಾಯಲು ಸಾಧ್ಯವಿಲ್ಲ. ಅವರು ಬಹು ಅಂಗಾಂಗ ವೈಫಲ್ಯಗಳಿಂದ ಬಳಲುತ್ತಿದ್ದರು. ಸಾವನ್ನಪ್ಪಿದ ವ್ಯಕ್ತಿ ಹೆಸರು ಹೇಳಲಾಗುವುದಿಲ್ಲ ಎಂದು ಶಿವಮೊಗ್ಗ ಡಿ ಹೆಚ್ ಒ ಸ್ಪಷ್ಟನೆ ನೀಡಿದ್ದಾರೆ. ಸಾಗರ ಮೂಲದ 24 ವರ್ಷದ ಯುವಕನಲ್ಲೂ ಝಿಕಾ ವೈರಸ್ ಸೋಂಕು ಪತ್ತೆಯಾಗಿದೆ.