ಮನೆ ಅಪರಾಧ 775 ಕೋಟಿ ರೂ. ಮೌಲ್ಯದ 155 ಕೆ.ಜಿ.ಯಷ್ಟು ಹೆರಾಯಿನ್‌ ವಶಕ್ಕೆ

775 ಕೋಟಿ ರೂ. ಮೌಲ್ಯದ 155 ಕೆ.ಜಿ.ಯಷ್ಟು ಹೆರಾಯಿನ್‌ ವಶಕ್ಕೆ

0

ಅಹಮದಾಬಾದ್ (Ahmedabad)- 775 ಕೋಟಿ ರೂ. ಮೌಲ್ಯದ ಹೆರಾಯಿನ್ ಅನ್ನು ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳವು (ಎಟಿಎಸ್‌) ವಶಪಡಿಸಿಕೊಂಡಿದೆ.

ಉತ್ತರಪ್ರದೇಶದ ಮುಜಾಫ್ಫರ್‌ ನಗರದ ಮನೆಯೊಂದರಲ್ಲಿ 775 ಕೋಟಿ ರೂ. ಮೌಲ್ಯದ 155 ಕೆ.ಜಿ.ಯಷ್ಟು ಹೆರಾಯಿನ್ ಅನ್ನು ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳವು (ಎಟಿಎಸ್‌) ದೆಹಲಿ ಮತ್ತು ಉತ್ತರಪ್ರದೇಶ ಪೊಲೀಸರ ಸಹಾಯದಿಂದ ವಶಪಡಿಸಿಕೊಂಡಿದೆ.

ಹೆರಾಯಿನ್ ಅನ್ನು ಪ್ರಮುಖ ಡ್ರಗ್ ಆರೋಪಿ ರಾಜಿ ಹೈದರ್ ಜೈದಿ ಅವರ ಸಹೋದರಿಯ ಮನೆಯಿಂದ ಭಾನುವಾರ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಟಿಎಸ್‌) ಸುನಿಲ್ ಜೋಶಿ ಮಾಹಿತಿ ನೀಡಿದ್ದಾರೆ.

ಗುಜರಾತ್‌ನ ಕರಾವಳಿ ಅರೇಬಿಯನ್ ಸಮುದ್ರದಲ್ಲಿ 280 ಕೋಟಿ ರೂ. ಮೌಲ್ಯದ ಹೆರಾಯಿನ್‌ನೊಂದಿಗೆ ಪಾಕಿಸ್ತಾನದ 9 ಪ್ರಜೆಗಳನ್ನು ಬಂಧಿಸಲಾಗಿತ್ತು. ಬಳಿಕ ಏಪ್ರಿಲ್ 27ರಂದು ದೆಹಲಿ ಮತ್ತು ಉತ್ತರಪ್ರದೇಶದ ವಿವಿಧೆಡೆ ಎಟಿಎಸ್ ಮತ್ತು ಮಾದಕವಸ್ತು ನಿಯಂತ್ರಣ ಮಂಡಳಿಯು (ಎನ್‌ಸಿಬಿ) ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಬಂಧಿತರಾಗಿದ್ದ ನಾಲ್ವರು ಆರೋಪಿಗಳಲ್ಲಿ ಜೈದಿ ಕೂಡಾ ಇದ್ದ.

ಮುಜಾಫ್ಘರ್‌ನಗರದಲ್ಲಿರುವ ತನ್ನ ಸಹೋದರಿಯ ಮನೆಯಲ್ಲಿ ಜೈದಿ ದೊಡ್ಡ ಪ್ರಮಾಣದಲ್ಲಿ ಮಾದಕ ದ್ರವ್ಯ ಸಂಗ್ರಹವನ್ನು ಹೊಂದಿದ್ದಾನೆ ಎಂಬ ಖಚಿತ ಮಾಹಿತಿಯ ಮೇರೆಗೆ ಎಟಿಎಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಜೋಶಿ ತಿಳಿಸಿದ್ದಾರೆ.

ಹಿಂದಿನ ಲೇಖನರಾಜ್ಯಕ್ಕೆ ಆಗಮಿಸಿದ ಅಮಿತ್‌ ಶಾ: ನಾಯಕತ್ವ ಬದಲಾವಣೆ ಕುರಿತು ಹೆಚ್ಚಿದ ಕುತೂಹಲ
ಮುಂದಿನ ಲೇಖನಆ್ಯಸಿಡ್ ದಾಳಿ ಪ್ರಕರಣ: ಆರೋಪಿ ಪತ್ತೆಗೆ ಲುಕ್‌ಔಟ್‌ ನೋಟಿಸ್