ಬೆಂಗಳೂರು: ಅಮೆರಿಕದ ಟೆಕ್ಸಾಸ್ನಲ್ಲಿ 7ನೇ ‘ನಾವಿಕ ವಿಶ್ವ ಕನ್ನಡ ನಡೆಯುತ್ತಿದೆ. ಸೆಪ್ಟೆಂಬರ್ 1ರಿಂದ ಇಂದಿನವರೆಗೆ ಈ ಸಮಾರಂಭ ನಡೆಯುತ್ತಿದೆ. ಇದರಲ್ಲಿ ಶಿವರಾಜ್ಕುಮಾರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾರೆ.
ಕಾರ್ಯಕ್ರಮಕ್ಕೆ ಶಿವರಾಜ್ ಕುಮಾರ್ ಮತ್ತು ಪತ್ನಿ ಗೀತಾ ಅವರನ್ನು ಮೆರವಣಿಗೆ ಮೂಲಕ ಕರೆದುಕೊಂಡು ಬಂದರು. ವೇದಿಕೆ ಮೇಲೆ ಶಿವರಾಜ್ ಕುಮಾರ್ ಅವರು ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪಂಚೆ ಧರಿಸಿ ಶಿವಣ್ಣ ಕುಣಿದ ಪರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಶಿವಣ್ಣನ ಎನರ್ಜಿ ಕಂಡು ಎಲ್ಲರೂ ವಾವ್ ಎನ್ನುತ್ತಿದ್ದಾರೆ. ‘ಘೋಸ್ಟ್, ‘ಕರಟಕ ದಮನಕ’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಶಿವರಾಜ್ಕುಮಾರ್ ಅವರು ಬ್ಯುಸಿ ಆಗಿದ್ದಾರೆ.














