ಮನೆ ಸುದ್ದಿ ಜಾಲ ಏ.26 ರಿಂದ 7ನೇ ಸುತ್ತಿನ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮ: ಡಾ. ಎಸ್.ಸಿ. ಸುರೇಶ್

ಏ.26 ರಿಂದ 7ನೇ ಸುತ್ತಿನ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮ: ಡಾ. ಎಸ್.ಸಿ. ಸುರೇಶ್

0

ಮಂಡ್ಯ: ರಾಜ್ಯಾದ್ಯಂತ ಪಶು ಸಂಗೋಪಲನೆ ಇಲಾಖೆ ಏಪ್ರಿಲ್ ೨೬ ರಿಂದ ೭ ನೇ ಸುತ್ತಿನ ಕಾಲುಬಾಯಿ ಜ್ವರದ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದುಜಿಲ್ಲಾ ಪಶುಸಂಗೋಪನೆ ಇಲಾಖೆಯ ಉಪ ನಿರ್ದೇಶಕಡಾ. ಎಸ್.ಸಿ. ಸುರೇಶ್ ಹೇಳಿದರು.

ಗುರುವಾರ (ಏ.೨೪) ರಂದುಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿಆಯೋಜಿಸಲಾಗಿದ್ದ ೭ ನೇ ಸುತ್ತಿನ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮದಅಧ್ಯಕ್ಷತೆ ವಹಿಸಿ ಮಾತನಾಡಿದಅವರುಜಿಲ್ಲೆಯಲ್ಲಿ ೪.೭೯ ಲಕ್ಷ ಜಾನುವಾರುಗಳ ಇದ್ದು ಮನೆ ಮನೆಗೂ ಭೇಟಿ ನೀಡಿ ಲಸಿಕೆ ಹಾಕುವ ಯೋಜನೆರೂಪಿಸಲಾಗಿದೆಎಂದು ತಿಳಿಸಿದರು.

ಮನ್ ಮುಲ್ ಸಹಯೋಗದೊಂದಿಗೆ ಕಾಲುಬಾಯಿ ಜ್ವರದ ಲಸಿಕೆ ನೀಡಲು ಈಗಾಗಲೇ ೪೬೯ ಲಸಿಕಾದರರನ್ನು ನೇಮಿಸಲಾಗಿದೆ, ಸುಮಾರುಒಂದುವರೆ ತಿಂಗಳೊಳಗೆ ಮನೆ ಮನೆ ತೆರಳಿ ಉಚಿತವಾಗಿ ಲಸಿಕೆ ಹಾಕುವ ಯೋಜನೆಕೈಗೊಂಡಿದ್ದೇವೆ, ಮನ್ ಮುಲ್ ಸಿಬ್ಬಂದಿ ವರ್ಗದವರು ಲಸಿಕಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಹಾಗೂ ನಮಗೆ ಬೇಕಾದಎಲ್ಲಾ ಮೂಲ ಸೌಕರ್ಯಗಳನ್ನು ನೀಡಲುಅನುಮತಿ ಸೂಚಿಸಿದ್ದಾರೆ ಎಂದು ತಿಳಿಸಿದರು.

ಜೊತೆಗೆ ೭ನೇ ಸುತ್ತಿನ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರವನ್ನು ಹಾಲು ಉತ್ಪಾದಕ ಸಹಕಾರ ಸಂಘಗಳ ಮೂಲಕ ಪ್ರಚಾರ ಪಡಿಸಲು ನಿರ್ದೇಶನ ನೀಡಲಾಗಿದೆ, ಲಸಿಕಾ ದಾರರಿಗೆ ಪ್ರಯಾಣ ವೆಚ್ಚವನ್ನು ಮನ್ ಮುಲ್ ನೀಡಲಿದೆಎಂದು ತಿಳಿಸಿದರು.

ಮನ್ ಮುಲ್ ವ್ಯವಸ್ಥಾಪಕ ನಿರ್ದೇಶಕಡಾ. ಮಂಜೇಶ್ ಮಾತನಾಡಿರಾಜ್ಯಾದ್ಯಂತ ಪಶು ಸಂಗೋಪನಾ ಇಲಾಖೆ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡು ಬಂದಿದೆ, ಜಿಲ್ಲೆಯಲ್ಲಿ ಈಗಾಗಲೇ ೬ ಸುತ್ತಿನ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬದಿದ್ದಾರೆ, ಎಂದಿನಂತೆ ಮುಂದೆಯೂ ಮನ್ ಮುಲ್ ನಿರಂತರವಾಗಿ ಲಸಿಕಾ ಕಾರ್ಯಕ್ರಮಕ್ಕೆ ಸಹಕಾರ ನೀಡುತ್ತದೆಎಂದು ಭರವಸೆ ನೀಡಿದರು.

ನಂತರಡಾ.ಎಸ್.ಸಿ ಸುರೇಶ್ ಮತ್ತು ಮನ್ ಮುಲ್ ವ್ಯವಸ್ಥಾಪಕ ನಿರ್ದೇಶಕ ಮಂಜೇಶ್ ೭ ನೇ ಸುತ್ತಿನ ಕಾಲುಬಾಯಿ ಜ್ವರದ ಲಸಿಕಾ ಪೋಸ್ಟರ್ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿಜಿಲ್ಲೆಯಎಲ್ಲಾತಾಲೂಕಿನ ಉಪ ನಿರ್ದೇಶಕರು ಮತ್ತು ಸಹಾಯಕ ನಿರ್ದೇಶಕರು ಉಪಸ್ಥಿತರಿದ್ದರು.