ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಘಟನೆ ಬೆಳಕಿಗೆ ಬಂದಿದೆ. ಪಕ್ಕದ ಮನೆಯವರೊಂದಿಗೆ ನಡೆದ ಗಲಾಟೆಯ ದ್ವೇಷದಿಂದ ಪುಟ್ಟ ಬಾಲಕನನ್ನು ಅಪಹರಿಸಿ, ಕೊಲೆ ಮಾಡಿ, ಶವವನ್ನು ಚೀಲದಲ್ಲಿ ಕಟ್ಟಿಹಾಕಿ ಕೆರೆಯಲ್ಲಿ ಬಿಸಾಕಿದ ಕ್ರೂರ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಬಾಲಕನನ್ನು ರಮಾನಂದ (ವಯಸ್ಸು 8) ಎಂದು ಗುರುತಿಸಲಾಗಿದೆ. ಈ ದುಷ್ಕೃತ್ಯದಲ್ಲಿ ಭಾಗಿಯಾದವನನ್ನು ಪಕ್ಕದ ಮನೆಯ ನಿವಾಸಿ ಮತ್ತೂರು ಎಂಬಾತ ಎಂದು ಪೊಲೀಸರು ಗುರುತಿಸಿದ್ದಾರೆ. ಶಂಕಿತನನ್ನು ಈಗಾಗಲೇ ಬಂಧಿಸಿ, ವಿಚಾರಣೆ ಮುಂದುವರಿಸುತ್ತಿದ್ದಾರೆ.
ಕೊಲೆಯ ಬಳಿಕ ಆರೋಪಿ ಮತ್ತೂರು ಮೃತದೇಹವನ್ನು ಚೀಲದಲ್ಲಿ ಕಟ್ಟಿ ಕೆರೆಯಲ್ಲಿ ಬಿಸಾಕಿದ್ದಾನೆ. ನೆನ್ನೆ ರಾಯಸಂದ್ರ ಕೆರೆಯ ಬಳಿ ಬಾಲಕನ ಮೃತದೇಹ ಪತ್ತೆಯಾಗಿದೆ. ಪರಪ್ಪನ ಅಗ್ರಹಾರ ಪೊಲೀಸರು ಕೂಡಲೇ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ಆರಂಭಿಸಿದ್ದಾರೆ. ಶಂಕಿತ ಆರೋಪಿ ಮತ್ತೂರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈತನ ವಿರುದ್ಧ ಅಪಹರಣ, ಕೊಲೆ ಮತ್ತು ಸಾಕ್ಷ್ಯ ನಾಶ ಮಾಡುವಂತ ಪ್ರಕರಣಗಳನ್ನು ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಇದೊಂದು ಬಾಲಕನ ಭವಿಷ್ಯವನ್ನು ನಾಶಮಾಡಿದ ದುಷ್ಟಕೃತ್ಯ. ಇಂತಹ ಅಪರಾಧಗಳಿಗೆ ತಕ್ಷಣವಾದ ಶಿಕ್ಷೆ ಮತ್ತು ನಿಸ್ಸಂಶಯ ನ್ಯಾಯವು ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ನೀಡಬಲ್ಲದು. ಸ್ಥಳೀಯರು ಕೂಡ ಈ ಘಟನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಶೀಘ್ರ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.














