ಮನೆ ಅಪರಾಧ ಶ್ರೀನಗರದಲ್ಲಿ ಕಂದಕಕ್ಕೆ ಉರುಳಿದ ಬಸ್: 9 ಜನರ ಸಾವು

ಶ್ರೀನಗರದಲ್ಲಿ ಕಂದಕಕ್ಕೆ ಉರುಳಿದ ಬಸ್: 9 ಜನರ ಸಾವು

0

ಶ್ರೀನಗರ(Shrinagar): ಕ್ಯಾಬ್‌ವೊಂದು ಕಂದಕಕ್ಕೆ ಉರುಳಿದ ಪರಿಣಾಮ ಸೇನಾ ಸಿಬ್ಬಂದಿ ಸೇರಿದಂತೆ ಒಂಬತ್ತು ಜನರು ಮೃತಪಟ್ಟಿರುವ ಘಟನೆ ಜಮ್ಮು–ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯ ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಈ ಕುರಿತು ಪೊಲೀಸ್‌ ಅಧಿಕಾರಿಗಳು ಗುರುವಾರ ಮಾಹಿತಿ ನೀಡಿದ್ದಾರೆ.

ಕಾರ್ಗಿಲ್‌ನಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಕ್ಯಾಬ್ ಬುಧವಾರ ತಡರಾತ್ರಿ ಝೋಜಿಲಾದಲ್ಲಿ ರಸ್ತೆಯಿಂದ ಉರುಳಿ ಆಳವಾದ ಕಂದಕಕ್ಕೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು, ಸೇನೆ ಮತ್ತು ಸ್ಥಳೀಯರು ಜೊತೆಯಾಗಿ ಕಾರ್ಯಾಚರಣೆ ಆರಂಭಿಸಿದ್ದು, ನಾಲ್ಕು ಮೃತದೇಹಗಳನ್ನು ಹೊರತೆಗೆದಿದ್ದಾರೆ. ಉಳಿದ ಐವರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಗಾಯಾಳುಗಳು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಹಿಂದಿನ ಲೇಖನಪಠ್ಯ ಪರಿಷ್ಕರಣೆ ವಿವಾದ: ಹೆಚ್.ಸಿ ಮಹದೇವಪ್ಪ ಆಕ್ರೋಶ
ಮುಂದಿನ ಲೇಖನಸುಸ್ಥಿರ ಬದುಕು ಕಟ್ಟಲು ಯುವ ಸಮುದಾಯ ಯೋಚಿಸಲಿ: ಹರೀಶ್‌ ಹಂದೆ