ಬೆಂಗಳೂರು: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮತ್ತೆ ಮೊಬೈಲ್‌ಗಳು ರಿಂಗಣಿಸುತ್ತಿವೆ. ಈ ಸಂಬಂಧ ಈ ಬಾರಿ ಜೈಲಿನ ಮುಖ್ಯ ಅಧೀಕ್ಷಕರೇ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನಾಲ್ಕು ದಿನಗಳ ಹಿಂದಷ್ಟೇ ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ ನೇತೃತ್ವದ ತಂಡ ವಿಚಾರಣಾಧೀನ ಕೈದಿಗಳಿರುವ ಹೈಸೆಕ್ಯೂರಿಟಿ ಬ್ಯಾರಕ್ ಮೇಲೆ ದಾಳಿ ನಡೆಸಿ ವಿಲ್ಸನ್ ಗಾರ್ಡನ್ ನಾಗ ಮತ್ತು ಆತನ ಸಹಚರರು ಇರುವ ಬ್ಯಾರಕ್‌ನಲ್ಲಿದ್ದ 18 ಮೊಬೈಲ್‌ಗಳು ಜಪ್ತಿ ಮಾಡಿದ್ದರು.
ಆ ಬಳಿಕ ಎಚ್ಚೆತ್ತ ಜೈಲಿನ ಮುಖ್ಯ ಅಧೀಕ್ಷಕ ಸುರೇಶ್, ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿನ ವಿಚಾರಣಾಧೀನ ಕೈದಿಗಳಿರುವ ಬ್ಯಾರಕ್‌ಗಳಲ್ಲಿ ಶೋಧಿಸಿದಾಗ 9 ಮೊಬೈಲ್‌ಗಳು ಪತ್ತೆಯಾಗಿವೆ. ಹೀಗಾಗಿ ಬ್ಯಾರಕ್‌ಗಳಲ್ಲಿ ಮೊಬೈಲ್‌ಗಳು ಹೇಗೆ ಬಂದವು? ಯಾರ್ಯಾರು ಇದರಲ್ಲಿ ಶಾಮೀಲಾಗಿದ್ದಾರೆ? ಎಂಬುದನ್ನು ಪತ್ತೆಹಚ್ಚುವಂತೆ ದೂರು ನೀಡಿದ್ದಾರೆ.
Saval TV on YouTube