ಮನೆ ರಾಜ್ಯ ಕೆವೈಸಿ ಅಪ್ಡೇಟ್ ಹೆಸರಿನಲ್ಲಿ ಹೋಟೆಲ್ ಮಾಲೀಕನಿಂದ 90 ಸಾವಿರ ದೋಚಿದ ಸೈಬರ್ ವಂಚಕರು

ಕೆವೈಸಿ ಅಪ್ಡೇಟ್ ಹೆಸರಿನಲ್ಲಿ ಹೋಟೆಲ್ ಮಾಲೀಕನಿಂದ 90 ಸಾವಿರ ದೋಚಿದ ಸೈಬರ್ ವಂಚಕರು

0

ತುಮಕೂರು: ಬ್ಯಾಂಕ್ ನಿಂದ ಮೇಸೆಜ್ ಬಂದಿದೆ ಎಂದು ನೋಡುವ ಮುನ್ನ ಸಾರ್ವಜನಿಕರು ಸಾಕಷ್ಟು ಎಚ್ಚರವಹಿಸದಿದ್ದರೆ, ಸೈಬರ್ ವಂಚಕರ ಬಲೆಗೆ ಬೀಳುತ್ತೀರಿ.

ಬ್ಯಾಂಕ್ ನಿಂದ ಮೇಸೆಜ್ ಬಂದಿದೆ ಎಂದು ನಂಬಿ ಹೋಟೆಲ್ ಮಾಲೀಕ 90 ಸಾವಿರ ಕಳೆದುಕೊಂಡ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರು ಜಿಲ್ಲೆ ತಿಪಟೂರು ಪಟ್ಟಣದಲ್ಲಿ ಪುಣ್ಯ ಎಂಬ ಹೆಸರಿನ ಹೋಟೆಲ್ ನಡೆಸುತ್ತಿರುವ ರೇವಣ್ಣಸಿದ್ದಪ್ಪ ಹಣ ಕಳೆದುಕೊಂಡವರು.

ಕೆವೈಸಿ ಅಪ್ಡೇಟ್ ಮಾಡಿ ಇಲ್ಲದಿದ್ದರೇ ನಿಮ್ಮ ಅಕೌಂಟ್ ಬ್ಲಾಕ್ ಆಗುತ್ತೆ ಎಂದು ಕೆನರಾ ಬ್ಯಾಂಕ್ ಹೆಸರಿನಿಂದ ರೇವಣ್ಣಸಿದ್ದಪ್ಪ ಮೊಬೈಲ್ ಗೆ ಮೇಸೆಜ್ ಬಂದಿದೆ. ಈ ಮೇಸೆಜ್ ನೋಡಿದ ರೇವಣ್ಣಸಿದ್ದಪ್ಪ ಕೂಡಲೇ ಆ ನಂಬರ್ ಗೆ ಕರೆ ಮಾಡಿದ್ದಾರೆ. ಈ ವೇಳೆ ನೀವು ಕೆವೈಸಿ ಅಪ್ಡೇಟ್ ಮಾಡಬೇಕು ಎಂದು ವಂಚಕರು ಹೇಳಿದ್ದಾರೆ.

ರೇವಣ್ಣ ಸಿದ್ದಪ್ಪನ ಬಳಿ ಪಾನ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ನಂಬರ್ ಪಡೆದಿದ್ದಾರೆ. ಕೂಡಲೇ ಒಂದು ಓಟಿಪಿ ಬಂದಿದೆ ಎಂದು ಆ ನಂಬರ್ ಪಡೆದ ಸೈಬರ್ ಖದೀಮರು. ರೇವಣ್ಣಸಿದ್ದಪ್ಪನ ಬ್ಯಾಂಕ್ ಖಾತೆಯಲ್ಲಿದ್ದ  90 ಸಾವಿರ ಹಣವನ್ನು  ಮತ್ತೊಂದು ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ.

ಹಣ ಕಳೆದುಕೊಂಡ ಬಳಿಕ ತಾನು ಮೋಸ ಹೋಗಿರೋದನ್ನ ತಿಳಿದ ಹೋಟೆಲ್ ಮಾಲೀಕ ಖದೀಮರ ವಿರುದ್ಧ ತುಮಕೂರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹಿಂದಿನ ಲೇಖನಅಕ್ರಮ ಹಣ ವರ್ಗಾವಣೆ: ಆಪ್ ನಾಯಕನ ಮನೆ ಮೇಲೆ ಇಡಿ ದಾಳಿ
ಮುಂದಿನ ಲೇಖನಅಕ್ರಮವಾಗಿ ಆಮೆ ಹಿಡಿದು ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ