ಬೆಂಗಳೂರು (Bengaluru): ಪೊಲೀಸ್ ಇಲಾಖೆಯಲ್ಲಿ 92 ಮಂದಿ ಪೊಲೀಸ್ ಇನ್ ಸ್ಪೆಕ್ಟರ್ ಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮೈಸೂರು ಜಿಲ್ಲೆಯ ಬನ್ನೂರು ಪೊಲೀಸ್ ಠಾಣೆಯ ಬಿ.ಚಿಕ್ಕರಾಜ ಶೆಟ್ಟಿ ಅವರನ್ನು ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಗೆ, ಮೈಸೂರಿನ ಪಿಟಿಎಸ್ ಮಾಧ್ಯನಾಯಕ್ ಅವರನ್ನು ಎಸಿಬಿಗೆ, ಡಿಸಿಆರ್ ಬಿ (ಮಂಡ್ಯ ಜಿಲ್ಲೆಗೆ ವರ್ಗಾವಣೆ ಆದೇಶದಲ್ಲಿರುವವರು) ಎಂ.ಮಹದೇವಸ್ವಾಮಿ ಅವರನ್ನು ಮಡಿಕೇರಿ ಚೆಸ್ಕಾಂ ಜಾಗೃತ ದಳ, ಅಶೋಕಪುರಂ ಪೊಲೀಸ್ ಠಾಣೆಯ ಬಿ.ಎಸ್.ಪ್ರಕಾಶ್ ಅವರನ್ನು ಶ್ರೀರಂಗಪಟ್ಟಣ ನಗರ ಪೊಲೀಸ್ ಠಾಣೆಗೆ, ಹಾಸನ ಜಿಲ್ಲೆಯ ಡಿಎಸ್ ಬಿಯ ಬಿ.ಜಿ.ಕುಮಾರ್ ಅವರನ್ನು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ, ಮಂಡ್ಯ ಜಿಲ್ಲೆ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯ ಎಸ್.ಸಂತೋಷ್ ಅವರನ್ನು ಮದ್ದೂರು ಪೊಲೀಸ್ ಠಾಣೆಗೆ, ಮೈಸೂರಿನ ಡಿಸಿಆರ್ ಇ ನ ಎಂ.ಸುನೀಲ್ ಕುಮಾರ್ ಅವರನ್ನು ಮಂಡ್ಯದ ಕಿಕ್ಕೇರಿ ಪೊಲೀಸ್ ಠಾಣೆಗೆ, ಮಂಡ್ಯ ಪೊಲೀಸ್ ಠಾಣೆಯ ಬಿ.ದೇವರಾಜ್ ಅವರನ್ನು ಮಂಡ್ಯ ಜಿಲ್ಲೆ ಡಿಸಿಆರ್ ಬಿಗೆ, ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯ ಬಿ.ಪುಟ್ಟಸ್ವಾಮಿ ಅವರನ್ನು ಮೈಸೂರಿನ ಡಿಸಿಆರ್ ಇ, ಮೈಸೂರು ಗ್ರಾಮಾಂತರ ವೃತ್ತ ಪೊಲೀಸ್ ಇನ್ ಸ್ಪೆಕ್ಟರ್ ಎಂ.ಮಹೇಶ್ ಅವರನ್ನು ಮೈಸೂರಿನ ಪಿಟಿಎಸ್, ಶ್ರೀರಂಗಪಟ್ಟಣ ಪೊಲೀಸ್ ಠಾಣೆಯ ಹೆಚ್.ಆರ್.ವಿವೇಕಾನಂದ ಅವರನ್ನು ಕೊಡಗು ಮಹಿಳಾ ಪೊಲೀಸ್ ಠಾಣೆಗೆ, ಮದ್ದೂರು ಪೊಲೀಸ್ ಠಾಣೆಯ ಕೆ.ಎಂ.ಹರೀಶ್ ಅವರನ್ನು ರಾಜ್ಯ ಗುಪ್ತ ವಾರ್ತೆಗೆ, ಕಿಕ್ಕೇರಿ ಪೊಲೀಸ್ ಠಾಣೆಯ ಎಂ.ಜಗದೀಶ್ ಅವರನ್ನು ರಾಜ್ಯ ಗುಪ್ತವಾರ್ತೆಗೆ ವರ್ಗಾಯಿಸಲಾಗಿದೆ.
ಉಳಿದಂತೆ ವರ್ಗಾವಣೆಗೊಂಡಿರುವವರ ಮಾಹಿತಿ ಈ ಕೆಳಗಿನಂತಿದೆ.