ಮನೆ ಆರೋಗ್ಯ ಬೆಟ್ಟದ ನೆಲ್ಲಿಕಾಯಿ

ಬೆಟ್ಟದ ನೆಲ್ಲಿಕಾಯಿ

0

 ಭೇದಿಯಾಗುವುದನ್ನು ತಡೆಯುವ ಗುಣ  :

★ ಬೆಟ್ಟದ ನೆಲ್ಲಿಕಾಯಿ ಸತ್ವ ಮತ್ತು ಮೆಥನಾಲ್ ದ್ರಾವಣ  ಉಪಯೋಗಿಸಿ ನೆಲ್ಲಿಕಾಯಿಯಿಂದ ತಯಾರಿಸಿದ ಸತ್ವವನ್ನು ಎರಡನ್ನೂ ಪ್ರಯೋಗ ಶಾಲೆಯಲ್ಲಿ ಭೇದಿಯಾಗದಂತೆ ಮಾಡಿದ ಇಲಿಗಳಿಗೆ ಸೇವಿಸಲು ಕೊಟ್ಟು ಪರೀಕ್ಷಿಸಿದಾಗ ಎರಡು ಸತ್ವಗಳಿಗೆ ಭೇಟಿಯಾಗದಂತೆ ತಡೆಯುವ ಗುಣವಿದೆಯೆಂದು ಕಂಡುಬಂದಿದೆ

Join Our Whatsapp Group

 ಮಲಬದ್ಧತೆಯನ್ನು ವಾಸಿ ಮಾಡುವ ಗುಣ :

★ ಬೆಟ್ಟದ ನೆಲ್ಲಿಕಾಯಿಯಿಂದ ತಯಾರಿಸಿದ ಸತ್ವಕ್ಕೆ ಮಲಬದ್ಧತೆಯನ್ನು ನಿವಾರಣೆ ಮಾಡುವ ಸಾಮರ್ಥ್ಯ ಇದೆಯೆಂದು ಇಲಿಗಳ ಮೇಲೆ ಹಾಗೂ ಪ್ರಯಗ ಶಾಲೆಯಲ್ಲಿ ವಿವಿಧ ಪ್ರಾಣಿಗಳ ಅಂಗಾಂಶಗಳ ಮೇಲೆ ನಡೆಸಿದ ಪ್ರಯೋಗದಿಂದ ತಿಳಿದುಬಂದಿದೆ.

 ಮಧುಮೇಹವನ್ನು ನಿಯಂತ್ರಣದಲ್ಲಿಡುವ ಗುಣ :

       ಹಲವಾರು ಸಂಶೋಧನಾ ಪ್ರಬಂಧಗಳಲ್ಲಿ ಮತ್ತು ಸಂಶೋಧನಾ ಪ್ರಬಂಧಗಳನ್ನು ಆಧರಿಸಿ ತಯಾರಿಸಲಾಗಿದ ವಿಮರ್ಶಾ ಲೇಖನಗಳಲ್ಲಿ ವ್ಯಕ್ತವಾದ ಅಭಿಪ್ರಾಯದ ಪ್ರಕಾರ ಬೆಟ್ಟದ ನೆಲ್ಲಿಕಾಯಿಯ ರಸ,ಚೂರ್ಣ ಮತ್ತು ವಿವಿಧ ಬಗೆಯ ರಾಸಾಯನಿಕ ದ್ರಾವಣ ಗಳನ್ನು ಉಪಯೋಗಿಸಿ ತಯಾರಿಸಿದ ಸತ್ವವನ್ನು ಇಲಿಗಳಿಗೆ ಸೇವಿಸಲು ಕೊಟ್ಟು ಪರೀಕ್ಷಿಸಿದಾಗ ಬೆಟ್ಟದ ನೆಲ್ಲಿಕಾಯಿಗೆ ಮಧುಮೇಹವನ್ನು ನಿಯಂತ್ರಿಣದಲ್ಲಿಡುವ ಸಾಮರ್ಥ್ಯವಿದೆಯೆನ್ನಲಾಗಿದೆ. ಸತ್ವದ ಈ ರಸದ ಈ ಗುಣಕ್ಕೆ ಅದರಲ್ಲಿ ಅಡಕವಾಗಿರುವ ಕೋರಿಲಜಿನ್  ಗ್ಯಾಲಿಕ್ ಆಮ್ಲ ಎಲ್ಲಾಜಿಕ್ ಆಮ್ಲ ಗ್ಯಾಲಕ್ಟೊ ಟ್ಯಾನಿನ್ಸ್ ಎಸ್ಟ್ರಡಿಯಾಲ್ ಕೆಂಫಿ ಜಿಯಟಿನ್  ಕ್ಟರ್ಸೆಟಿನ್ ಲ್ಯೂಕೊಡೆಲ್ಫಿನಿಡಿನ್ ಎಂಬ ರಾಸಾಯನಿಕ ಘಟಕಗಳು ಕಾರಣವೆಂದು ಕಂಡುಬಂದಿದೆ ಮೆಥನಾಲ್ ಉಪಯೋಗಿಸಿ ತಯಾರಿಸಿದ ಸತ್ವಕ್ಕೆ ಅಲ್ಫ ಅಮೈಲೇಸ್, ಆಲ್ಫಗ್ಲೂಕೊಸಿಡೇಸ್  ಮತ್ತು ಆೄಂಟಿಗ್ಲೈಕೇಶನ್ ಗಳ ಕಾರ್ಯದ ಮೇಲೆ ಪ್ರತಿರೋಧವನ್ನುಂಟು ಮಾಡಿ ತನ್ಮೂಲಕ ಉತ್ಪತ್ತಿಯ ಮೇಲೆ ನಿಯಂತ್ರಣ ಸಾಧಿಸಿ ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆಯೆಂದು ತಿಳಿದುಬಂದಿದೆ.

 ಬೆಟ್ಟದ ನೆಲ್ಲಿಕಾಯಿಯಂತೆ,ಮರದ ಎಲೆಗೂ ಮಧುಮೇಹವನ್ನು ನಿಯಂತ್ರಣದಲ್ಲಿಡುವ ಗುಣವಿದೆಯೆಂದು ವರದಿಯಾಗಿದೆ.ನೀರು ಮತ್ತು ಮೆಥನಾಲ್  ದ್ರಾವಣ ಉಪಯೋಗಿಸಿ ಮರದ ಎಲೆಯಿಂದ ತಯಾರಿಸಿದ ಸತ್ವವನ್ನು 45 ದಿನಗಳವರೆಗೆ ಇಲಿಗಳಿಗೆ ಸೇವಿಸಲು ಕೊಡಲಾಯಿತು. ಅವಧಿಯ ನಂತರ ಎಲ್ಲಾ ಗುಂಪಿನ ಇಲಿಗಳನ್ನು ಪರೀಕ್ಷಿಸಿದಾಗ, ಎಲೆಯ ಸತ್ವದ ಪ್ರಮಾಣಕ್ಕೆ ಅನುಗುಣವಾಗಿ ರಕ್ತದಲ್ಲಿನ ಗ್ಲುಕೋಸ್ ಪ್ರಮಾಣ ಕಡಿಮೆಯಾಗಿದುತ್ತೆಂದು ವರದಿಯಾಗಿದೆ. ಜೊತೆಗೆ ಎಲೆಯ ಸತ್ವಕ್ಕೆ ಮಧುಮೇಹದಿಂದ ಉಂಟಾಗಬಹುದಾದ ಪ್ರತಿಕೂಲ ಪರಿಣಾಮಗಳಿಂದ ದೇಹವನ್ನು ಕಾಪಾಡುವ ಸಾಮರ್ಥ್ಯವಿದೆಯೆಂದು ಕಂಡುಬಂದಿದೆ.ಸತ್ವದ ಈ ಗುಣಕ್ಕೆ ಅದಕ್ಕೆ ಇರುವ ಆೄಂಟಿಆಕ್ಸಿಡೆಂಟ್ ಗುಣ ಕಾರಣವೆನ್ನಲಾಗಿದೆ.