ಮನೆ ರಾಷ್ಟ್ರೀಯ ದೆಹಲಿಯಲ್ಲಿ ಹದಗೆಟ್ಟ ವಾಯು ಗುಣಮಟ್ಟ: ಉಸಿರಾಡುವುದೂ ಕಷ್ಟ

ದೆಹಲಿಯಲ್ಲಿ ಹದಗೆಟ್ಟ ವಾಯು ಗುಣಮಟ್ಟ: ಉಸಿರಾಡುವುದೂ ಕಷ್ಟ

0

ನವದೆಹಲಿ: ರಾಷ್ಟ್ರ ರಾಜಧಾನಿಯ ವಾಯು ಗುಣಮಟ್ಟ ತೀವ್ರವಾಗಿ ಹದಗೆಟ್ಟಿದ್ದು, ಎಕ್ಯೂಐ ತೀವ್ರ ಕಳಪೆ ವರ್ಗದಲ್ಲಿದೆ. ಒಂದು ರೀತಿಯಲ್ಲಿ ಉಸಿರಾಡಲೂ ಕಷ್ಟವೆಂಬಂತಹ ಪರಿಸ್ಥಿತಿ ತಲೆದೋರಿದೆ. ಈ ಹಿನ್ನೆಲೆಯಲ್ಲಿ ವಾಯು ಗುಣಮಟ್ಟ ನಿರ್ವಹಣಾ ಆಯೋಗ ಜಿಆರ್​ಎಪಿ ಮೂರನೇ ಹಂತದ ಕ್ರಮಕ್ಕೆ ಶುಕ್ರವಾರದಿಂದ ಚಾಲನೆ ನೀಡಿದೆ.

Join Our Whatsapp Group

ಜಿಆರ್​ಎಪಿ ಮೂರನೇ ಹಂತದಲ್ಲಿ ಅಗತ್ಯ ಸರ್ಕಾರಿ ಯೋಜನೆಗಳು, ಗಣಿಗಾರಿಕೆ ಮತ್ತು ಕಲ್ಲು ಪುಡಿ ಮಾಡುವಿಕೆ ಮತ್ತು ದೆಹಲಿ ಸುತ್ತಮುತ್ತಲ ಪ್ರದೇಶಗಳಲ್ಲಿ ಬಿಎಸ್ ​2 ಪೆಟ್ರೋಲ್ ಮತ್ತು ಬಿಎಸ್​4 ಡೀಸೆಲ್ ವಾಹನಗಳ ಮೇಲಿನ ನಿಷೇಧ ಹೊರತುಪಡಿಸಿ ನಿರ್ಮಾಣ ಮತ್ತು ತೆರವು ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತಿದೆ.

ದೆಹಲಿಯ ವಾಯು ಗುಣಮಟ್ಟಕ್ಕೆ ಅನುಗುಣವಾಗಿ ನಾಲ್ಕು ಹಂತಗಳಿಗೆ ಗ್ರೇಡೆಡ್ ರೆಸ್ಪಾನ್ಸ್ ಆ್ಯಕ್ಷನ್ ಪ್ಲಾನ್ ಜಾರಿ ಮಾಡಲಾಗುತ್ತದೆ. ನವೆಂಬರ್​ 14ರಂದು ನಡೆದ ತುರ್ತು ಪರಿಶೀಲನಾ ಸಭೆಯ ನಂತರದ ಸಿಎಕ್ಯೂಎಂ ಉಪ ಸಮಿತಿ ದೆಹಲಿ ವಾಯುಗುಣಮಟ್ಟ ತೀವ್ರವಾಗಿ ಹದಗೆಟ್ಟಿದೆ ಎಂದಿದ್ದು, ಮುಂದಿನ ದಿನಗಳಲ್ಲಿ ತೀವ್ರ ಕಳಪೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

ಈ ಹಿನ್ನೆಲೆಯಲ್ಲಿ ಉಪಸಮಿತಿ ಜಿಆರ್​ಎಪಿಯ ಮೂರನೇ ಹಂತದ ಕ್ರಮ ಜಾರಿಗೆ ತರಲು ನಿರ್ಧರಿಸಿದೆ. ನವೆಂಬರ್​ 15ರಿಂದ ಬೆಳಗ್ಗೆ 8ಕ್ಕೆ ನಗರದಲ್ಲಿ ಜಿಆರ್​ಎಪಿ ಮೂರನೇ ಹಂತದ ಜಾರಿಗೆ ಆದೇಶಿಸಲಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಕೊಂಚ ತಡವಾಗಿಯೇ ರಾಜಧಾನಿಯಲ್ಲಿ ಜಿಆರ್​ಎಪಿ ಮೂರನೇ ಹಂತದ ಯೋಜನೆಯನ್ನು ಜಾರಿಗೆ ತರಲಾಗಿದೆ. ಕಳೆದ ವರ್ಷ ನವೆಂಬರ್​ 2ರಿಂದಲೇ ಕಾರ್ಯಾಚರಣೆ ಯೋಜನೆಯನ್ನು ಎನ್​ಸಿಆರ್​ನಲ್ಲಿ ಜಾರಿಗೆ ತರಲಾಗಿತ್ತು.

ಮೂರನೇ ಹಂತದಲ್ಲಿ 11 ಕಾರ್ಯ ಯೋಜನೆಯ ಅಂಶಗಳಿದೆ. ಅತೀ ಹೆಚ್ಚು ಟ್ರಾಫಿಕ್​ ಇರುವ ಪ್ರದೇಶದಲ್ಲಿ ನೀರು ಸಿಂಪಡನೆ ಮತ್ತು ಟ್ರಾಫಿಕ್​ ಕಡಿಮೆ ಮಾಡುವ ಉದ್ದೇಶದಿಂದ ವಿಭಿನ್ನ ದರದೊಂದಿಗೆ ಸಾರ್ವಜನಿಕ ಸಾರಿಗೆ ಸೇವೆ ಬಳಕೆಗೆ ಪ್ರೋತ್ಸಾಹ ನೀಡುವುದು ಸೇರಿದೆ.