ಬೆಂಗಳೂರು: ಬೈಕ್ ಕಳ್ಳತನ ಮಾಡುತ್ತಿದ್ದ 12 ಅಂತರಾಜ್ಯ ಕಳ್ಳರನ್ನು ಬಂಧನ ಮಾಡಲಾಗಿದೆ. ನಗರದ ಆರ್.ಟಿ.ನಗರ, ಸೋಲದೇವನಹಳ್ಳಿ, ಬಾಗಲಗುಂಟೆ, ಚಿಕ್ಕಜಾಲ, ಎಲೆಕ್ಟ್ರಾನಿಕ್ ಸಿಟಿ, ಬಾಣಸವಾಡಿ, ಕಾಡುಗೋಡಿ ಪೊಲೀಸರಿಂದ ಆರೋಪಿಗಳ ಬಂಧನ ಮಾಡಿದ್ದು, ಒಟ್ಟು 51 ಲಕ್ಷ ಮೌಲ್ಯದ 61 ಬೈಕ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದೇವಸ್ಥಾನ, ಜಾತ್ರೆ ಮತ್ತು ನೋ ಪಾರ್ಕಿಂಗ್ಗಳಲ್ಲಿ ಖದೀಮರಿಂದ ಕಳ್ಳತನ ಮಾಡಲಾಗುತ್ತಿತ್ತು.
ಆರೋಪಿಗಳು ಹಲವು ಮಾದರಿಯಲ್ಲಿ ಬೈಕ್ಗಳನ್ನು ಕಳ್ಳತನ ಮಾಡುತ್ತಿದ್ದರು. ಬೈಕ್ಗಳು ಕದ್ದಿದ್ದಲ್ಲದೇ ಅದೇ ಬೈಕ್ಗಳಲ್ಲಿ ಸರಗಳ್ಳತನ ಕೂಡ ಮಾಡುತ್ತಿದ್ದರು.
ಇದೇ ರೀತಿಯಾಗಿ ಆರ್ ಎಕ್ಸ್ ಬೈಕ್ ಗಳನ್ನೇ ಟಾರ್ಗೆಟ್ ಮಾಡಿ ಕಳವು ಮಾಡಿ ಮಾರಾಟ ಮಾಡುತ್ತಿದ್ದ ಇಮ್ರಾನ್ ಮತ್ತು ಸಮೀರ್ನನ್ನು ಬಂಧಿಸಿದ ಆರ್.ಟಿ.ನಗರ ಪೊಲೀಸರು ಬಂಧಿಸಿದ್ದಾರೆ. ವೆಹಿಕಲ್ ಬಿಡಿ ಭಾಗಗಳನ್ನು ಬಿಚ್ಚಿ ಓಎಲ್ಎಕ್ಸ್ ಮೂಲಕ ಮಾರಾಟ ಮಾಡುತ್ತಿದ್ದರು. ಕಳ್ಳತನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ.
ಇನ್ನು ನಗರದಲ್ಲಿ ತಡರಾತ್ರಿ ತೆರೆದ ಮನೆಗಳನ್ನು ಟಾರ್ಗೆಟ್ ಮಾಡಿ ಮೊಬೈಲ್, ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಗಲು ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗಳು ರಾತ್ರಿ ವೇಳೆ ಮನೆಗಳ್ಳತನ ಮಾಡ್ತಿದ್ದರು.
ಉತ್ತರಾಖಂಡ ಮೂಲದ ಜತಿನ್, ಮನೀಶ್ ಬಂಧಿತರು. ಕದ್ದ ಬೈಕ್ಗಳಲ್ಲಿಯೇ ಹೋಗಿ ಕಳ್ಳತನ ಮಾಡುತ್ತಿದ್ದ ಆರೋಪಿಗಳು. ಬಂಧಿತರಿಂದ 14 ಲಕ್ಷ ಮೌಲ್ಯದ 11 ಬೈಕ್ಗಳು, 21 ಮೊಬೈಲ್ಗಳು, 21 ಗ್ರಾಂ ಚಿನ್ನಾಭರಣವನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ವಶಕ್ಕೆ ಪಡೆದ್ದಾರೆ.